ADVERTISEMENT

ಸುರ‍ಪುರ ವಿಧಾನಸಭೆ ಕ್ಷೇತ್ರ | ರಾಜಾ ವೇಣುಗೋಪಾಲ ನಾಯಕಗೆ ಕಾಂಗ್ರೆಸ್‌ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 16:16 IST
Last Updated 21 ಮಾರ್ಚ್ 2024, 16:16 IST
<div class="paragraphs"><p>ರಾಜಾ ವೇಣುಗೋಪಾಲ ನಾಯಕ</p></div>

ರಾಜಾ ವೇಣುಗೋಪಾಲ ನಾಯಕ

   

ಸುರಪುರ (ಯಾದಗಿರಿ ಜಿಲ್ಲೆ): ಸುರ‍ಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗಿದೆ.

ಶಾಸಕ ರಾಜಾ ವೆಂಕಟಪ್ಪನಾಯಕ ಅವರ ನಿಧನದಿಂದ ತೆರವಾದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7 ರಂದು ಉಪಚುನಾವಣೆ ನಡೆಯಲಿದೆ.

ADVERTISEMENT

1982ರ ಡಿಸೆಂಬರ್ 22 ರಂದು ಜನಿಸಿದ ರಾಜಾ ವೇಣುಗೋಪಾಲ ನಾಯಕ ಬಿ.ಇ.(ಸಿವಿಲ್) ಪದವೀಧರರು. ತಾಯಿ ರಾಣಿ ಲತಾನಾಯಕ, ಸಹೋದರ ರಾಜಾ ಸಂತೋಷನಾಯಕ, ಪತ್ನಿ ರಾಣಿ ಲಿಖಿತಾನಾಯಕ, ಪುತ್ರಿ ರಾಣಿ ಸುಹಾನಿನಾಯಕ, ಪುತ್ರ ರಾಜಾ ಯದುವೀರನಾಯಕ.

ತಾತಾ ರಾಜಾ ಕುಮಾರನಾಯಕ ಎರಡು ಬಾರಿ, ತಂದೆ ರಾಜಾ ವೆಂಕಟಪ್ಪನಾಯಕ 4 ಬಾರಿ ಶಾಸಕರಾಗಿದ್ದರು. ಚಿಕ್ಕಪ್ಪ ಒಂದು ಬಾರಿ ಸಂಸದರಾಗಿದ್ದರು. ಕಳೆದ 20 ವರ್ಷಗಳಿಂದ ತಂದೆಯವರ ಚುನಾವಣೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.