ಹುಣಸಗಿ: ‘ಸಂಸ್ಕಾರದ ಜೊತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕರು ಉತ್ತಮ ಸಮಾಜದ ರಕ್ಷಕರು’ ಎಂದು ಸ್ಪಂದನ ಪಬ್ಲಿಕ್ ಶಾಲೆಯ ಅಧ್ಯಕ್ಷ ಮುರಗೆಣ್ಣ ದೇಸಾಯಿ ಹೇಳಿದರು.
ಹುಣಸಗಿ ಪಟ್ಟಣದ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ಇಂದಿನ ಸಮಾಜ ಸುಧಾರಣೆಯಲ್ಲಿ, ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ’ ಎಂದರು. ಶಾಲಾ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಗುತ್ತೇದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುಳಬಾಳ: ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಭೀಮನಗೌಡ ಬಿರಾದಾರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸುತ್ತಾರೆ’ ಎಂದರು.
ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸನಗೌಡ ವಠಾರ, ಪ್ರಭುಗೌಡ ಬಿರಾದಾರ, ಕಡ್ಲಬಾಳಪ್ಪ, ಶಶಿ ಪಾಟೀಲ, ಹುಲಗಣ್ಣಗೌಡ, ಯಂಕಮ್ಮ ಬೊಮ್ಮನಹಳ್ಳಿ, ಸರೋಜಾ ಅಂಬಿಗೇರ, ಭಾಗ್ಯಶ್ರೀ ಕಕ್ಕೇರಿ ಇದ್ದರು.
ಬಲಶೆಟ್ಟಿಹಾಳ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮುಖ್ಯ ಶಿಕ್ಷಕ ಸಂಗಯ್ಯ ಬಾಚ್ಯಾಳ ಮಾತನಾಡಿದರು. ಶಿಕ್ಷಕಿ ಕಾಮಾಕ್ಷಿ ಕುಲಕರ್ಣಿ, ಗುರುದೇವಿ ಮಲಗಲದಿನ್ನಿ, ಬಸಿರಾಬೇಗಂ ಸುವರ್ಣಾ, ವಿಜಯಲಕ್ಷ್ಮಿ, ಜಗದೇವಿ, ಸಾಯಬಣ್ಣ, ಆನಂದ, ಮೌನೇಶ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.