ಹುಣಸಗಿ ತಾಲ್ಲೂಕಿನ ಅಗ್ನಿ ಗ್ರಾಮದ ಜಮೀನಿನಲ್ಲಿ ಅಕಾಲಿಕ ಮಳೆ ಗಾಳಿಯಿಂದ ಕಟಾವಿಗೆ ಬಂದ ಭತ್ತ ಸಂಪೂರ್ಣ ನೆಲೆ ಕಚ್ಚಿದೆ
ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನಲ್ಲಿ ಶನಿವಾರ ತಡರಾತ್ರಿ ಸುರಿದ ಗಾಳಿ, ಮಳೆಗೆ ಗ್ರಾಮೀಣ ಭಾಗದ ಅಲ್ಲಲ್ಲಿ ಭತ್ತ ನೆಲಕ್ಕೆ ಬಿದ್ದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ವಜ್ಜಲ, ಕಲ್ಲದೇವನಹಳ್ಳಿ, ಅರಕೇರಾ ಜೆ., ಮುದನೂರು, ತಗ್ಗೆಳ್ಳಿ, ದ್ಯಾಮನಾಳ, ಕಾಮನಟಗಿ, ಹಂದ್ರಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ರಾತ್ರಿ ಮಳೆ ಗಾಳಿಗೆ ನೆಲಕಚ್ಚಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
‘ಇಷ್ಟು ದಿನಗಳ ಕಾಲ ಗೊಬ್ಬರ ಹಾಕಿ ಕಳೆ ತೆಗೆದಿರುವ ಭತ್ತ ನೆಲಕಚ್ಚಿದೆ. ಇನ್ನೇನು ಒಂದು ವಾರದಲ್ಲಿ ರಾಶಿ ಮಾಡುವ ಹಂತದಲ್ಲಿರುವಾಗಲೇ ಅಕಾಲಿಕ ಮಳೆ ಹಾಗೂ ಗಾಳಿಗೆ ಹಾನಿಯಾಗಿದೆ’ ಎಂದು ವಜ್ಜಲ್ ಗ್ರಾಮದ ಪರಮೇಶ್ ಗಿಂಡಿ, ಅರಕೇರಾ ಜೆ ಗ್ರಾಮದ ಅಂಬರೀಶ್ ಬಿರಾದಾರ, ಭೀಮಣ್ಣ ಹೇಳಿದರು.
‘ಆರ್‌ಎನ್‌ಆರ್ ತಳಿಯ ಭತ್ತವೇ ನೆಲಕ್ಕೆ ಬಿದ್ದಿದೆ. ಬೇಸಿಗೆ ಹಂಗಾಮಿನಲ್ಲಿ ಆರ್‌ಎನ್‌ಆರ್ ತಳಿಗೆ ಉತ್ತಮ ಧಾರಣೆ ಲಭ್ಯವಾಗುವುದರಿಂದಾಗಿ ಆ ಬೆಳೆ ಹಾಕಿದ್ದೇವು. ಈಗ ಹಾನಿಯಾಗಿದೆ’ ಎಂದು ಮುದುನೂರು ಬಿ ಗ್ರಾಮದ ರಾಮನಗೌಡ ಬೆಕ್ಕಿನಾಳ, ಸಂಗನಗೌಡ ಬಗಲಾಪುರ್, ಅಗ್ನಿ ಗ್ರಾಮದ ರೈತ ಮರಳಪ್ಪ ತಿಳಿಸಿದರು.
ನೆಲ ಕಚ್ಚಿದ ಭತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.