ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)
Credit: X/@AmitShah
ಬೆಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಖಾಲಿ ಇರುವ 1,161 ಕಾನ್‌ಸ್ಟೆಬಲ್ ‘ಟ್ರೇಡ್ಸ್‌ಮನ್’ ಹುದ್ದೆಗಳ ಭರ್ತಿಗೆ ನೇಮಕಾತಿ ಆರಂಭವಾಗಿದೆ.
10 ನೇ ತರಗತಿ ಪಾಸಾದ ಕನಿಷ್ಠ 18 ವರ್ಷ ವಯಸ್ಸು ಪೂರೈಸಿದ ಗರಿಷ್ಠ 23 ವರ್ಷದೊಳಗಿನ ಅರ್ಹ ಪುರುಷ, ಮಹಿಳಾ ಅಭ್ಯರ್ಥಿಗಳು ಇದೇ ಏಪ್ರಿಲ್ 3ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ₹100 ಇದ್ದು, ಎಸ್‌ಸಿ/ಎಸ್‌ಟಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ದೈಹಿಕ ಪರೀಕ್ಷೆ, ಕಂಪ್ಯೂಟರ್ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ.
ಪೂರ್ಣ ಅಧಿಸೂಚನೆ ವೀಕ್ಷಿಸಲು ಹಾಗೂ ಆನ್‌ಲೈನ್ ಅರ್ಜಿಸಲ್ಲಿಸಲು https://cisfrectt.cisf.gov.in/ ವೆಬ್‌ಸೈಟ್ ಪರಿಶೀಲಿಸಿ.
ಹುದ್ದೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.