
ಸಾಂದರ್ಭಿಕ ಚಿತ್ರ
ನೆಕ್ಸ್ಟ್ ಜೆನ್ ಸೈಂಟಿಸ್ಟ್ಸ್ ಫೌಂಡೇಷನ್ ನೀಡುವ ಅವಕಾಶ ಇದಾಗಿದೆ.
ಅರ್ಹತೆ: ಜೀವವಿಜ್ಞಾನಕ್ಕೆ ಸಂಬಂಧಿಸಿದಂತೆ ಎರಡು ಅಥವಾ ಮೂರು ತಿಂಗಳ ಅವಧಿಯ ಇಂಟರ್ನ್‌ಷಿಪ್ ಮಾಡಲು ಆಸಕ್ತರಾಗಿರಬೇಕು.
ಭಾರತೀಯ ಸಂಸ್ಥೆಯಲ್ಲಿ 3 ವರ್ಷದ ಪದವಿ ಕೋರ್ಸ್‌ನ 2ನೇ ವರ್ಷದ ವಿದ್ಯಾರ್ಥಿಯಾಗಿರಬೇಕು, 4 ವರ್ಷಗಳ ಪದವಿ ಕೋರ್ಸ್‌ನ 2 ಅಥವಾ 3ನೇ ವರ್ಷದ ವಿದ್ಯಾರ್ಥಿಯಾಗಿರಬೇಕು, 2 ವರ್ಷಗಳ ಸ್ನಾತಕೋತ್ತರ ಪದವಿಯ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು ಅಥವಾ 5 ವರ್ಷದ ಇಂಟಿಗ್ರೇಟೆಡ್ ಪ್ರೋಗ್ರ್ಯಾಂನ 2, 3 ಅಥವಾ 4ನೇ ವರ್ಷದ ವಿದ್ಯಾರ್ಥಿಯಾಗಿರಬೇಕು.
ತಮ್ಮ ಅಧ್ಯಯನ ಸಂಸ್ಥೆಯ ಹೊರಗಿನ ಯಾವುದೇ ಭಾರತೀಯ ಸಂಸ್ಥೆಯ ಪ್ರೊಫೆಸರ್/ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್ (ಪಿ.ಐ) ಅವರ ಪ್ರಯೋಗಾಲಯದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು. ಉದ್ದೇಶಿತ ಪಿ.ಐ ಮಾರ್ಗದರ್ಶಕರು ಕನಿಷ್ಠ ಮೂರು ವರ್ಷಗಳ ಬೋಧನಾ ಅನುಭವ ಹೊಂದಿರಬೇಕು. ಪ್ರಮುಖ ನಿಯತಕಾಲಿಕಗಳಲ್ಲಿ ಅವರ ಕನಿಷ್ಠ ಮೂರು ಲೇಖನಗಳು ಪ್ರಕಟವಾಗಿರಬೇಕು.
ಆರ್ಥಿಕ ನೆರವು: ಆಯ್ಕೆಯಾದ ಇಂಟರ್ನಿಗಳಿಗೆ ಹಲವು ಸೌಲಭ್ಯಗಳನ್ನು ಒಳಗೊಂಡಂತೆ ತಿಂಗಳಿಗೆ ₹ 6,000ದವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15-03-2026
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: Short Url: www.b4s.in/praja/NGSF1⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.