ADVERTISEMENT

ಭಾರತೀಯ ರೈಲ್ವೆ ‘ಲೆವೆಲ್‌–1’ ಹುದ್ದೆಗಳ ನೇಮಕ: ಶೈಕ್ಷಣಿಕ ಅರ್ಹತೆ ಸಡಿಲಿಕೆ

ಪಿಟಿಐ
Published 3 ಜನವರಿ 2025, 10:59 IST
Last Updated 3 ಜನವರಿ 2025, 10:59 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಲೆವೆಲ್‌–1 (ಹಿಂದಿನ ಗ್ರೂಪ್‌– ಡಿ) ನೇಮಕಾತಿಗೆ ಇದ್ದ ಕನಿಷ್ಠ ವಿದ್ಯಾರ್ಹತೆಯ ಮಾನದಂಡಗಳನ್ನು ರೈಲ್ವೆ ಮಂಡಳಿ ಸಡಿಲಿಸಿದೆ.

ಹೊಸ ನಿಯಮಗಳ ಪ್ರಕಾರ, ಅಭ್ಯರ್ಥಿಯು 10ನೇ ತರಗತಿ ಪಾಸಾಗಿರಬೇಕು ಅಥವಾ ಐಟಿಐ ಡಿಪ್ಲೊಮಾ ಹೊಂದಿರಬೇಕು ಅಥವಾ ತತ್ಸಮಾನ ಅರ್ಹತೆ ಪಡೆದಿರಬೇಕು ಅಥವಾ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯಿಂದ (ಎನ್‌ಸಿವಿಟಿ) ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್‌ ಪ್ರಮಾಣಪತ್ರ (ಎನ್‌ಎಸಿ) ಪಡೆದವರು ಲೆವೆಲ್‌–1 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.

ADVERTISEMENT

ಈ ಹಿಂದೆ ತಾಂತ್ರಿಕ ವಿಭಾಗಕ್ಕೆ 10 ತರಗತಿ ಪಾಸಾದವರು ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರುವವರು ಅಥವಾ ಐಟಿಐ ಡಿಪ್ಲೊಮಾ ಪೂರ್ಣಗೊಳಿಸಿರುವುದು ಕಡ್ಡಾಯವಾಗಿತ್ತು.

ಲೆವೆಲ್-1 ಹುದ್ದೆಗಳಲ್ಲಿ ವಿವಿಧ ಇಲಾಖೆಗಳಿಗೆ ಸಹಾಯಕರು, ಪಾಯಿಂಟ್‌ಮೆನ್ ಮತ್ತು ಟ್ರ್ಯಾಕ್ ನಿರ್ವಾಹಕರನ್ನು ಒಳಗೊಂಡಿವೆ.

ರೈಲ್ವೆ ನೇಮಕಾತಿ ಮಂಡಳಿ ಇತ್ತೀಚೆಗೆ ಲೆವೆಲ್‌ –1 ಹುದ್ದೆಗೆ ಖಾಲಿ ಇರುವ 32 ಸಾವಿರ ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇದರ ನೇಮಕಾತಿ ಪ್ರಕ್ರಿಯೆ ಜ.23 ರಿಂದ ಫೆ.22ರವರೆಗೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.