ಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮವು ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಿದೆ. ಶಿಕ್ಷಕ ವೃತ್ತಿಯನ್ನು ಮಾಡ ಬಯಸುವವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಅಕ್ಟೋಬರ್ 16 ರಂದು ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹುದ್ದೆಗಳ ವಿವರ:
ಪ್ರಾಧ್ಯಾಪಕ ಹುದ್ದೆ – 2
ಸಹ ಪ್ರಾಧ್ಯಾಪಕ – 4
ಸಹಾಯಕ ಪ್ರಾಧ್ಯಾಪಕ ಹುದ್ದೆ– 5
ಶೈಕ್ಷಣಿಕ ಅರ್ಹತೆಗಳೇನು?
ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಡಿ, ಎಂಎಸ್, ಎಂಎಸ್ಸಿ ಅಥವಾ ಪಿಎಚ್‌ಡಿ ಪದವಿಯನ್ನು ಪಡೆದಿರಬೇಕು.
ಸಂಬಂಧಿತ ಕ್ಷೇತ್ರಕ್ಕೆ ಅಗತ್ಯ ಅನುಭವ ಹಾಗೂ ಅರ್ಹತೆಗಳಿರಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ಬೋಧನಾ ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಇಲಾಖೆಯು ತಿಳಿಸಿದೆ.
ವಯೋಮಿತಿ:
ಗರಿಷ್ಠ 67 ವಯೋಮಿತಿಯ ಒಳಗೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು.
ಸಂಬಳ ಎಷ್ಟು?
ಪ್ರಾಧ್ಯಾಪಕ – ₹222,543
ಸಹ ಪ್ರಾಧ್ಯಾಪಕ – ₹147,986
ಸಹಾಯಕ ಪ್ರಾಧ್ಯಾಪಕ – ₹127,141
ಅಗತ್ಯ ದಾಖಲೆಗಳೇನು ?
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ, ಎಂಬಿಬಿಎಸ್ ಪ್ರಮಾಣಪತ್ರ, ಪಿಜಿ ಮತ್ತು ಡಿಪ್ಲೊಮಾ ಪ್ರಮಾಣಪತ್ರಗಳು, ಎಂಡಿ ಅಥವಾ ಎಂಎಸ್ ಪದವಿಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದ ಮೂಲ ಪ್ರತಿಗಳು ಹಾಗೂ ಜೆರಾಕ್ಸ್ ಪ್ರತಿಯನ್ನು ತರುವುದು.
ಸಂದರ್ಶನ ನಡೆಯುವ ಸ್ಥಳ:
ಅಕ್ಟೋಬರ್ 16 ರಂದು ಇಎಸ್‌ಐಸಿ ವೈದ್ಯಕೀಯ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಗೆ ಸಂದರ್ಶನವನ್ನು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.