ADVERTISEMENT

DevOps Engineer | ಡೆವೊಪ್ಸ್ ಎಂಜಿನಿಯರ್‌; ಹೆಚ್ಚಿದ ಬೇಡಿಕೆ

ರವಿಚಂದ್ರ ಎಂ.
Published 3 ಮಾರ್ಚ್ 2025, 0:30 IST
Last Updated 3 ಮಾರ್ಚ್ 2025, 0:30 IST
<div class="paragraphs"><p>ಡೆವೊಪ್ಸ್</p></div>

ಡೆವೊಪ್ಸ್

   

ಸಾ ಫ್ಟ್‌ವೇರ್‌(ತಂತ್ರಾಂಶ) ಅಭಿವೃದ್ಧಿಪಡಿಸುವ ಕ್ಷೇತ್ರ ಹಲವು ಬದಲಾವಣೆಗಳನ್ನು ಕಂಡಿದೆ. ತಂತ್ರಾಂಶ ಅಭಿವೃದ್ಧಿ ಮಾಡುವ ಸಂಸ್ಥೆಗಳು ಗ್ರಾಹಕಸ್ನೇಹಿ ಆಗಲು,  ಸಾಫ್ಟ್‌ವೇರ್‌ ಡೆವಲಪರ್ಸ್‌ ಮತ್ತು ಐ.ಟಿ. ಆಪರೇಷನ್ಸ್‌ ತಂಡಗಳ ನಡುವೆ ಸಮನ್ವಯ ಸಾಧಿಸುವ ಪ್ರಯತ್ನವಾಗಿ ಡೆವೊಪ್ಸ್‌ ಎಂಜಿನಿಯರ್‌ ಇರುತ್ತಾರೆ.  ಡೆವೊಪ್ಸ್‌ ಎಂದರೆ ಡೆವ್‌ಲೆಪ್‌ಮೆಂಟ್‌+ಆಪರೇಷನ್‌.

ಡೆವೊಪ್ಸ್‌ನ ರೂಪುರೇಷೆ:

ADVERTISEMENT

ಮೊದಲೆಲ್ಲ ಒಂದು ತಂತ್ರಾಂಶ ಸಂಪೂರ್ಣವಾಗಿ ಅಭಿವೃದ್ಧಿಗೊಂಡ ನಂತರ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲಾಗುತ್ತಿತ್ತು. ಇದರಿಂದ ತಂತ್ರಾಂಶದಲ್ಲಿರುವ ದೋಷ (ಬಗ್ಸ್‌)ಗಳನ್ನು ಹೆಕ್ಕಿ ತೆಗೆಯುವುದು ಪ್ರಯಾಸದಾಯಕ ಎನಿಸಿತ್ತು. ಆದರೆ ಈಗ ಹಾಗಲ್ಲ. ಡೆವೊಪ್ಸ್‌ ಸಿದ್ಧಾಂತವು ಅಭಿವೃದ್ಧಿ ಮಾದರಿಯನ್ನು ಅನುಸರಿಸುವುದರಿಂದ ತಂತ್ರಾಂಶ ಅಭಿವೃದ್ಧಿ ಹಂತದಲ್ಲಿ ಇರುವಾಗಲೇ ಅದನ್ನು ಪರೀಕ್ಷೆ ಒಳಪಡಿಸುತ್ತದೆ. ಇದರಿಂದ ತಂತ್ರಾಂಶದಲ್ಲಿನ ದೋಷಗಳನ್ನು ಶೀಘ್ರ ಪತ್ತೆ ಹಚ್ಚಿ, ನಿವಾರಣೆ ಮಾಡುವುದು ಸಾಧ್ಯ.

ಕ್ಷಿಪ್ರ ಬದಲಾವಣೆ ಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ ಗ್ರಾಹಕರು ತಂತ್ರಾಂಶ ಅಭಿವೃದ್ಧಿ ಸಂಸ್ಥೆಗಳಿಂದ ಶೀಘ್ರ ಹಾಗೂ ಗುಣಮಟ್ಟದ ಸೇವೆಯನ್ನು ಬಯಸುತ್ತಾರೆ. ಡೆವೊಪ್ಸ್ ವೃತ್ತಿಯ ಸಿದ್ಧಾಂತವೇ ನಿರಂತರ ಸಂಯೋಜನೆ ಮತ್ತು ನಿರಂತರ ವಿಲೇವಾರಿ (Continuous Integration / Continuous ಡೆಲಿವರಿ). ಈ ವಿಧಾನದಿಂದ ಗ್ರಾಹಕರಿಗೆ ವೇಗವಾಗಿ ಪ್ರಾಡಕ್ಟ್ ವಿಲೇವಾರಿ ಮಾಡಲು ಸಹಕಾರಿಯಾಗುತ್ತದೆ. ಮುಖ್ಯವಾಗಿ ಆಟೋಮೇಷನ್ ಮೂಲಕ ಸಾಫ್ಟ್‌ವೇರ್‌ ಅಭಿವೃದ್ಧಿ ಸರಪಳಿಯಲ್ಲಿ ವೇಗ ಮತ್ತು ಕ್ಷಮತೆ ತರಬಹುದು.

ಡೆವೊಪ್ಸ್‌ ಆಗುವುದು ಹೇಗೆ?

ಡೆವೊಪ್ಸ್‌ ಕ್ಷೇತ್ರದಲ್ಲಿ ಕ್ಷಮತೆ ಹಾಗೂ ಕೌಶಲ ಗಳಿಸಲು ಮೂರು ಪ್ರಮುಖ ದಾರಿಗಳಿವೆ. 

*ನೀವು ಈಗತಾನೇ ಪದವಿ ಪೂರೈಸಿ ಔದ್ಯೋಗಿಕ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದ್ದರೆ, ಪ್ರಾರಂಭಿಕ ಹಂತದ ಡೆವೊಪ್ಸ್ ಕೋರ್ಸ್‌ಗಳನ್ನು ಮಾಡಬಹುದು

*ನೀವು ಈಗಾಗಲೇ ಐ. ಟಿ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಡೆವೊಪ್ಸ್ ಕ್ಷೇತ್ರವನ್ನು ಅನ್ವೇಷಿಸಲು ಬಯಸಿದ್ದೆ ಆದರೆ, ಅನೇಕ ಮುಂದುವರಿದ(advanced) ಕೋರ್ಸ್‌ಗಳನ್ನು ಮಾಡಬಹುದು.

*ನಿಮ್ಮ ಸಂಸ್ಥೆ ಈಗಾಗಲೇ ನಿರ್ದಿಷ್ಟ ಕ್ಲೌಡ್ ಮತ್ತು ಡೆವೊಪ್ಸ್ ಟೂಲ್ಸ್‌ಗಳನ್ನು ಬಳಸುತ್ತಿದರೆ, ಆ ನಿರ್ದಿಷ್ಟ ಟೂಲ್ಸ್‌ಗಳನ್ನು ಬಳಸುವ ವಿಚಾರದಲ್ಲಿ ಪರಿಣತಿ ಪಡೆಯಬಹುದು.

*ಈ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಅನೇಕ ಕೋರ್ಸ್‌ಗಳು ಉಚಿತವಾಗಿ ಲಭ್ಯವಿದೆ. ಇಲ್ಲಿ ಅಂಥ ಪ್ರಮುಖ 5 ಕೋರ್ಸ್‌ಗಳ ವೆಬ್ ಕೊಂಡಿಗಳ ಜತೆಗೆ ವಿವರಣೆ ನೀಡಲಾಗಿದೆ.

1. DevOps Culture and Mindset

*ಕೋರ್ಸೆರಾದಲ್ಲಿ ಉಚಿತ ಆಡಿಟ್ ಕೋರ್ಸ್ ಲಭ್ಯ.

*ಎಂಜಿನಿಯರಿಂಗ್‌ ಪದವೀಧರರು ಮತ್ತು ಐ. ಟಿ ತಂತ್ರಜಾನದ ಮೂಲ ಟೂಲ್ಸ್‌ಗಳ ಬಗ್ಗೆ ಜ್ಞಾನ ಉಳ್ಳವರು ಈ ಕೋರ್ಸ್‌ಗೆ ಹೆಸರು ನೋಂದಾಯಿಸಿಕೊಳ್ಳಬಹುದು.

*https://www.coursera.org/learn/devops-culture-and-mindset

*ತರಬೇತಿ ಸಮಯ: ಮೂರು ವಾರಗಳು /14 ಗಂಟೆ

*ತರಬೇತಿ ವಿಧಾನ: ಆನ್‌ಲೈನ್‌

2. Introduction to Jenkins

*LinuxFoundationX: Introduction to Jenkins ಎಂಬ ಈ ಕೋರ್ಸ್ ಉಚಿತವಾಗಿ ಲಭ್ಯ. ಸರ್ಟಿಫಿಕೇಷನ್ ಬೇಕಿದ್ದರೆ ಶುಲ್ಕ ಕೊಟ್ಟು ನೋಂದಣಿ ಮಾಡಿಕೊಳ್ಳಬಹುದು.

*ಸಾಫ್ಟ್‌ವೇರ್‌ ಅಭಿವೃದ್ಧಿ ಬಗ್ಗೆ ಕನಿಷ್ಠ ಆರಂಭಿಕ ಜ್ಞಾನ ಇರಬೇಕು.

*ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ಗೆ ಸಮಯ ನೀಡಬಹುದು.

*https://www.edx.org/learn/computer-science/the-linux-foundation-introduction-to-jenkins

*ತರಬೇತಿ ವಿಧಾನ: ಆನ್‌ಲೈನ್‌

3. Docker Essentials

*ಈ ಕೋರ್ಸ್ ಉಡೆಮಿ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ಲಭ್ಯ.

*ಲಿನಕ್ಸ್ ಆಪರೇಟಿಂಗ್ ಸಿಸ್ಟಮ್‌ನ ಜ್ಞಾನ ಅವಶ್ಯಕ.

*https://www.udemy.com/course/docker-essentials/

*5 ಗಂಟೆಗಳ , 52 ವಿಡಿಯೊ ತರಬೇತಿ ರೆಕಾರ್ಡಿಂಗ್ಸ್ ಲಭ್ಯ

*ತರಬೇತಿ ವಿಧಾನ: ಆನ್‌ಲೈನ್‌ 

4. Kubernetes: Getting Started

*ಈ ಕೋರ್ಸ್ ಉಡೆಮಿ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ಲಭ್ಯ.

*4 ಗಂಟೆಗಳ , 15 ವಿಡಿಯೊ ತರಬೇತಿ ರೆಕಾರ್ಡಿಂಗ್ಸ್ ಲಭ್ಯ.

*https://www.udemy.com/course/kubernetes-getting-started/

*ಈಗಾಗಲೇ ಡೆವೊಪ್ಸ್ ಕ್ಷೇತ್ರದಲ್ಲಿ ಸ್ವಲ್ಪ ಅನುಭವ ಇದ್ದು ,ಕುಬೆರ್ನೆಟ್ಸ್ ತಂತ್ರಾಂಶ ಕಲಿಯ ಬಯಸುವವರು ಸಲ್ಲಿಸಬಹುದು.

*ತರಬೇತಿ ವಿಧಾನ: ಆನ್‌ಲೈನ್‌

5. Getting Started with DevOps on AWS

*ಈ ಟುಟೋರಿಯಲ್ AWSನಿಂದ ಉಚಿತವಾಗಿ ಲಭ್ಯ

*1 ಗಂಟೆ ತರಬೇತಿ ರೆಕಾರ್ಡಿಂಗ್ಸ್ ಲಭ್ಯ

*AWS ಕ್ಲೌಡ್ ಆಧರಿಸಿ ಡೆವೊಪ್ಸ್‌ನಲ್ಲಿ ತೊಡಗಿಸಿಕೊಳ್ಳ ಬಯುಸುವವರಿಗೆ ಸೂಕ್ತ

*ಐ. ಟಿ ಕ್ಷೇತ್ರದಲ್ಲಿ ಇರುವ ಯಾರೇ ಆಗಲಿ ಡೆವೊಪ್ಸ್ ನ basics ತಿಳಿಯಲು ಬಯಸುವವರು.

*https://explore.skillbuilder.aws/learn/courses/2000/getting-started-with-devops-on-aws

*ತರಬೇತಿ ವಿಧಾನ:ಆನ್‌ಲೈನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.