ಎಐ ಚಿತ್ರ
ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಕಲಾತ್ಮಕ ನೋಟ, ಸೂಕ್ಷ್ಮ ವಿವರಗಳಿಗೆ ಹೊಳಪು ನೀಡುವ ಪೇಂಟಿಂಗ್ಸ್ (Paintings), ಶಿಲ್ಪಕಲೆ(Sculpture), ದೃಶ್ಯಕಲೆ (Visual Art), ಅನ್ವಯಿಕ ಕಲೆ(Applied Art) ಮತ್ತು ಕಲಾ ಇತಿಹಾಸದ ಅಧ್ಯಯನವನ್ನು ಒಳಗೊಂಡಿರುವ 'ಲಲಿತ ಕಲೆ'(Fine Arts) ವಿಸ್ತಾರವಾದ ಕೋರ್ಸ್. ವಾಸ್ತುಶಿಲ್ಪ, ಸಂಗೀತ, ಕಾವ್ಯದೊಂದಿಗೆ ಪ್ರದರ್ಶನ ಕಲೆಗಳಾದ ರಂಗಭೂಮಿ ಮತ್ತು ನೃತ್ಯವೂ ಸಹ ಲಲಿತಕಲೆಯ ವ್ಯಾಪ್ತಿಗೇ ಸೇರಿವೆ.
ಚಿತ್ರಕಲಾ ಕೋರ್ಸ್‌ಗೆ ಸೇರಲು ಅರ್ಹತೆಗಳು ಆಯ್ದುಕೊಳ್ಳುವ ಕೋರ್ಸ್ ಮತ್ತು ಕಾಲೇಜಿನ ಮೇಲೆ ಅವಲಂಬಿತ. ಆದಾಗ್ಯೂ, ಪದವಿ(ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್)ಗೆ ಸೇರಲು ಸಾಮಾನ್ಯ ಅರ್ಹತೆ ಪಿಯುಸಿ ಉತ್ತೀರ್ಣರಾಗಿರಬೇಕು.
ಕಲಾ ಪದವಿ ವಿಷಯಗಳು: ನಾಲ್ಕು ವರ್ಷದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA) ಪದವಿಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಡ್ರಾಯಿಂಗ್, ಪೇಂಟಿಂಗ್, ಶಿಲ್ಪಕಲೆ, ಮುದ್ರಣ ತಯಾರಿಕೆ, ಕಲಾ ಇತಿಹಾಸ, ಬಣ್ಣ ಸಿದ್ಧಾಂತ, ದೃಶ್ಯ ಸಂವಹನ, ಅನಿಮೇಷನ್, ಡಿಜಿಟಲ್ ಆರ್ಟ್, ಫಿಗರ್ ಡ್ರಾಯಿಂಗ್, ಛಾಯಾಗ್ರಹಣ, ಗ್ರಾಫಿಕ್ ವಿನ್ಯಾಸ, ಸೆರಾಮಿಕ್ಸ್, ಜವಳಿ ವಿನ್ಯಾಸದಂತಹ ಕಲಾ ಪ್ರಕಾರಗಳನ್ನು ಅಧ್ಯಯನ ಮಾಡುತ್ತಾರೆ. ಆಯಾ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಕಾಲೇಜಿನಿಂದ ಕಾಲೇಜಿಗೆ ಬದಲಾಗಬಹುದು.
ರಾಜ್ಯದಲ್ಲಿ ಒಟ್ಟು 65 ಚಿತ್ರಕಲಾ ಶಿಕ್ಷಣ ನೀಡುವ ಕಾಲೇಜುಗಳಿವೆ. ಧಾರವಾಡ ಮತ್ತು ತುಮಕೂರಿನಲ್ಲಿ ಮಾತ್ರ ಸರ್ಕಾರಿ ಚಿತ್ರಕಲಾ ಕಾಲೇಜುಗಳಿವೆ. ಇನ್ನುಳಿದಂತೆ 23 ಅನುದಾನಿತ ಹಾಗೂ 40 ಅನುದಾನ ರಹಿತ ಚಿತ್ರಕಲಾ ಕಾಲೇಜುಗಳಿವೆ.
* ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ,(ಪೇಂಟಿಂಗ್/ ಅಪ್ಲೈಡ್ ಆರ್ಟ್/ಶಿಲ್ಪಕಲೆ/ ಕಲಾ ಇತಿಹಾಸ/ ಗ್ರಾಫಿಕ್ಸ್), ವಿಜಯ ಕಾಲೇಜು ಆಫ್ ಫೈನ್ ಆರ್ಟ್ಸ್ ಗದಗ (ಪೇಂಟಿಂಗ್/ ಅಪ್ಲೈಡ್ ಆರ್ಟ್) (ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ)
* ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಧಾರವಾಡ, ವಿಜಯ ಕಲಾಮಂದಿರ ಗದಗ, ಬಾದಾಮಿ ಕಲಾಶಾಲೆ, ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ ಹುಬ್ಬಳ್ಳಿ., ಮಹಾಲಸಾ ಚಿತ್ರಕಲಾ ಕಾಲೇಜು, ಮಂಗಳೂರು (ಕನ್ನಡ ವಿಶ್ವವಿದ್ಯಾಲಯ ಹಂಪಿ), ಸರ್ಕಾರಿ ಚಿತ್ರಕಲಾ ಕಾಲೇಜು ತುಮಕೂರು (ತುಮಕೂರು ವಿಶ್ವವಿದ್ಯಾಲಯ)
* ಚಿತ್ರಕಲಾ ಪರಿಷತ್, ಬೆಂಗಳೂರು, ಆಚಾರ್ಯ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು (ಬೆಂಗಳೂರು ವಿಶ್ವವಿದ್ಯಾಲಯ)
* ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) (ಮೈಸೂರು ವಿಶ್ವವಿದ್ಯಾಲಯ)
* ಎಂಎಂಕೆ ದೃಶ್ಯ ಕಲಾ ಕಾಲೇಜು ಗುಲ್ಬರ್ಗ(ಕಲಬುರಗಿ ವಿಶ್ವವಿದ್ಯಾಲಯ)
ಚಿತ್ರಕಲಾ ಪದವಿ ಪೂರ್ಣಗೊಳಿಸಿದವರು ಸರ್ಕಾರಿ ಪ್ರಾಥಮಿಕ/ಹೈಸ್ಕೂಲ್ ನಲ್ಲಿ ಕಲಾಶಿಕ್ಷಕರಾಗಬಹುದು. ಇಲ್ಲವೇ ವಿವಿಧ ಕಂಪನಿಗಳು, ಜಾಹೀರಾತು ಸಂಸ್ಥೆಗಳು, ಪ್ರಕಾಶನ ಸಂಸ್ಥೆಗಳು, ವೆಬ್ ಡಿಸೈನ್ ಕಂಪನಿಗಳು, ಅನಿಮೇಷನ್ ಸ್ಟುಡಿಯೋಗಳು, ಚಲನಚಿತ್ರ ಮತ್ತು ಟಿವಿ ಉದ್ಯಮ, ಸ್ವತಂತ್ರ ಕಲಾವಿದ/ಡಿಸೈನರ್ ಆಗಿಯೂ ಕೆಲಸ ಮಾಡಬಹುದು.
ವಿದ್ಯಾರ್ಥಿಗಳು ಕಲಾಭ್ಯಾಸಕ್ಕೆ ಉತ್ಸುಕರಾಗಿದ್ದಾರೆ. ಆದರೆ ಸರ್ಕಾರ ನೇಮಕಾತಿ ಮಾಡದ ಕಾರಣ ಅವರೆಲ್ಲ ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ.–ಬಿ.ಎಚ್.ಕುರಿಯವರ, ಮುಖ್ಯಸ್ಥ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡ
* ಗ್ರಾಫಿಕ್ ಡಿಸೈನಿಂಗ್: ಜಾಹೀರಾತುಗಳು ಲೋಗೋಗಳು ಪೋಸ್ಟರ್‌ಗಳು ವೆಬ್‌ಸೈಟ್‌ಗಳು ಮತ್ತು ಇತರ ದೃಶ್ಯ ಸಂವಹನಗಳ ರಚನೆಯ ಕಲಿಕೆ.
*ಅನಿಮೇಷನ್: 2D ಮತ್ತು 3D ಅನಿಮೇಷನ್ ತಂತ್ರಗಳ ಕಲಿಕೆ.
* ಇಲಸ್ಟ್ರೇಷನ್ : ಪುಸ್ತಕ ನಿಯತಕಾಲಿಕೆ ಮತ್ತು ಇತರ ಪ್ರಕಟಣೆಗಳಿಗೆ ಚಿತ್ರಗಳ ರಚನೆ
* ಜಾಹೀರಾತು: ಉತ್ಪನ್ನಗಳು ಮತ್ತು ಸೇವೆಗಳನ್ನು ಉತ್ತೇಜಿಸಲು ದೃಶ್ಯ ಜಾಹೀರಾತು ರಚನೆ
* ವೆಬ್ ಡಿಸೈನ್ : ವೆಬ್‌ಸೈಟ್ ವಿನ್ಯಾಸ ಮತ್ತು ಅಭಿವೃದ್ಧಿ
* ಪ್ಯಾಕೇಜಿಂಗ್ ಡಿಸೈನ್ : ಉತ್ಪನ್ನಗಳಿಗಾಗಿ ಆಕರ್ಷಕ ಪ್ಯಾಕೇಜಿಂಗ್ ವಿನ್ಯಾಸ
* ಫ್ಯಾಷನ್ ಡಿಸೈನ್ : ಬಟ್ಟೆ ಮತ್ತು ಪರಿಕರಗಳ ವಿನ್ಯಾಸ
* ಇಂಟೀರಿಯರ್ ಡಿಸೈನ್ : ಒಳಾಂಗಣ ವಿನ್ಯಾಸ ಸ್ಥಳ ಯೋಜನೆ ಬಣ್ಣ ಸಿದ್ಧಾಂತ ಪೀಠೋಪಕರಣಗಳ ಆಯ್ಕೆ ಕಲಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.