ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಐಡಿಆರ್‌ಬಿಟಿ, ಫುಲ್‌ಬ್ರೈಟ್-ನೆಹರೂ, ಫ್ಲಿಪ್‌ಕಾರ್ಟ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 0:30 IST
Last Updated 17 ಮಾರ್ಚ್ 2025, 0:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

ಐಡಿಆರ್‌ಬಿಟಿ ಸಮ್ಮರ್ ಇಂಟರ್ನ್‌ಷಿಪ್‌

ಇನ್ಸ್‌ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಆ್ಯಂಡ್‌ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ (ಐಡಿಆರ್‌ಬಿಟಿ)ಈ ಇಂಟರ್ನ್‌ಷಿಪ್‌ ಒದಗಿಸುತ್ತದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳಲು ಈ ಇಂಟರ್ನ್‌ಷಿಪ್ ಅವಕಾಶ ನೀಡುತ್ತದೆ.

ADVERTISEMENT

ಅರ್ಹತೆ:  ಮಾನ್ಯತೆ ಪಡೆದ ಸ್ನಾತಕೋತ್ತರ ತಾಂತ್ರಿಕ/ಆಡಳಿತ ಕೋರ್ಸ್‌ಗಳಿಗೆ ಅಥವಾ ಪ್ರತಿಷ್ಠಿತ ಭಾರತೀಯ ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ಆರ್ಥಿಕ ಸಹಾಯ:  ಮಾಸಿಕ ₹12,500 ಸ್ಟೈಪೆಂಡ್
ಅರ್ಜಿ ಸಲ್ಲಿಸುವ ವಿಧಾನ:  ಇ-ಮೇಲ್ ಮೂಲಕ: isip@idrbt.ac.in.

ಅರ್ಜಿ ಸಲ್ಲಿಸಲು ಕೊನೆ ದಿನ: 15–4–2025

ಮಾಹಿತಿಗೆ: www.b4s.in/pjvi/IDSI1

****

ಫುಲ್‌ಬ್ರೈಟ್-ನೆಹರೂ ಮಾಸ್ಟರ್ಸ್ ಫೆಲೋಷಿಪ್ಸ್‌

ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್‌ ಫೌಂಡೇಷನ್ (ಯುಎಸ್ಐಇಎಫ್) ನೀಡುವ ಫೆಲೋಷಿಪ್‌ ಇದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಆಯ್ದ ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಿರ್ದಿಷ್ಟ ಅಧ್ಯಯನ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಮುಂದುವರಿಸಬಹುದು.


ಅರ್ಹತೆ: ಭಾರತೀಯ ವಿಶ್ವವಿದ್ಯಾಲಯದಿಂದ ಯು.ಎಸ್‌ ಬ್ಯಾಚುಲರ್ಸ್ ಪದವಿಗೆ ಸಮಾನವಾದ ಪದವಿಯಲ್ಲಿ ಕನಿಷ್ಠ ಶೇ 55ರಷ್ಟು  ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ನಾಲ್ಕು ವರ್ಷಗಳ ಪದವಿ/ಸ್ನಾತಕೋತ್ತರ ಪದವಿಯನ್ನು ಅಥವಾ 4 ವರ್ಷಗಳಿಗಿಂತ ಕಡಿಮೆ ಅವಧಿಯದ್ದಾಗಿದ್ದರೆ ಪೂರ್ಣಾವಧಿಯ ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು. ಕನಿಷ್ಠ 3 ವರ್ಷಗಳ ಪೂರ್ಣಾವಧಿಯ (ವೇತನ ಸಹಿತ) ವೃತ್ತಿಪರ ಕೆಲಸದ ಅನುಭವ ಇರಬೇಕು. 

ಆರ್ಥಿಕ ಸಹಾಯ:  ಬೋಧನೆ ಮತ್ತು ಶುಲ್ಕಗಳಿಗೆ ಧನಸಹಾಯ ಮತ್ತು ಇತರ ಪ್ರಯೋಜನಗಳು.
ಅರ್ಜಿ ಸಲ್ಲಿಸಲು ಕೊನೆ ದಿನ: 14-05-2025
ಹೆಚ್ಚಿನ ಮಾಹಿತಿಗೆ: www.b4s.in/pjvi/FNMF1

****

ಫ್ಲಿಪ್‌ಕಾರ್ಟ್ ಫೌಂಡೇಷನ್ ಸ್ಕಾಲರ್‌ಷಿಪ್‌

ಕಿರಾಣಿ ಅಂಗಡಿ ಮಾಲೀಕರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ಫೌಂಡೇಷನ್ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವೃತ್ತಿಪರ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ಕಿರಾಣಿ ಅಂಗಡಿ ಮಾಲೀಕರ ಮಕ್ಕಳ ಸಬಲೀಕರಣಕ್ಕಾಗಿ ಈ ವಿದ್ಯಾರ್ಥಿವೇತನವು ಮೀಸಲಾಗಿದೆ.

ಅರ್ಹತೆ:  ಅಭ್ಯರ್ಥಿಗಳು ಪ್ರಸ್ತುತ ಭಾರತದಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವೃತ್ತಿಪರ ಪದವಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಕೋರ್ಸ್‌ಗಳ 1ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರಬೇಕು. ಹೆತ್ತವರಲ್ಲಿ ಒಬ್ಬರು ಕಿರಾಣಿ ಅಂಗಡಿಯ ಮಾಲೀಕರಾಗಿರಬೇಕು (‍ಕೆಎಸ್ಒ). ಅಭ್ಯರ್ಥಿಗಳು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ ₹ 5 ಲಕ್ಷವನ್ನು ಮೀರಬಾರದು.

ಆರ್ಥಿಕ ಸಹಾಯ: ₹ 50,000 ನಿಗದಿತ ವಿದ್ಯಾರ್ಥಿವೇತನ.
ಅರ್ಜಿ ಸಲ್ಲಿಸಲು ಕೊನೆ ದಿನ: 16-04-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/pjvi/FLIP1

****

ಪ್ರವೇಶ ಪ್ರಕ್ರಿಯೆ ಆರಂಭ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಪ್ರಸಕ್ತ 2024-25ನೇ

ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ವಿವಿಧ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಸ್‌.ಡಬ್ಲ್ಯು, ಬಿ.ಬಿ.ಎ, ಬಿ.ಸಿ.ಎ, ಬಿ.ಎಲ್ಐ.ಎಸ್ಸಿ, ಸ್ನಾತಕೋತ್ತರ ಕೋರ್ಸುಗಳಾದ ಎಂ.ಎ, ಎಂ.ಎಸ್ಸಿ, ಎಂ.ಕಾಂ, ಎಂ.ಸಿ.ಜೆ, ಎಂ.ಎಸ್‌.ಡಬ್ಲ್ಯು, ಎಂ.ಎಲ್‌.ಐಎಸ್ಸಿ, ಎಂಸಿಎ, ಎಂಬಿಎ, ಹಾಗೂ ವಿವಿಧ ಪಿಜಿ ಸರ್ಟಿಫಿಕೇಟ್‌, ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌ www.ksoumysuru.ac.in ನಲ್ಲಿ ಅರ್ಜಿಯನ್ನು ಸಲ್ಲಿಸಿ, ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬಹುದು. ಮಾಹಿತಿಗೆ ದೂ:080-23448811 ಅಥವಾ ಮೊ: 9741197921 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.