ADVERTISEMENT

ಉದ್ಯೋಗ ಕಿರಣ: ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 23:30 IST
Last Updated 14 ಡಿಸೆಂಬರ್ 2025, 23:30 IST
   

ವರ್ಕ್‌ ಫ್ರಂ ಹೋಮ್‌

ಮೋಷನ್‌ ಗ್ರ್ಯಾಫಿಕ್ಸ್‌: ಅಂಡರ್‌ಪಿನ್‌ ಸರ್ವೀಸಸ್‌ ಸಂಸ್ಥೆಯು ಮೋಷನ್‌ ಗ್ರ್ಯಾಫಿಕ್ಸ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅಡೋಬ್‌ ಆಫ್ಟರ್‌ ಎಫೆಕ್ಟ್ಸ್‌ ಕುರಿತು ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಜನವರಿ 9ರೊಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್‌ ತಿಂಗಳಿಗೆ ₹ 10,000– ₹ 15,000.

ಸಂಪರ್ಕ: https://shorturl.at/rMOeC.

ADVERTISEMENT

ವಿಡಿಯೊ ಎಡಿಟಿಂಗ್‌/ ಮೇಕಿಂಗ್‌: ಎನ್‌ವಿಎಐ ಟೆಕ್ನಾಲಜೀಸ್‌ ಸಂಸ್ಥೆಯು ವಿಡಿಯೊ ಎಡಿಟಿಂಗ್‌/ ಮೇಕಿಂಗ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅಡೋಬ್‌ ಆಫ್ಟರ್‌ ಎಫೆಕ್ಟ್ಸ್‌, ಅಡೋಬ್‌ ಫೋಟೊಶಾಪ್‌ ಮತ್ತು ಡಾವಿನ್ಸಿ ರೆಸಾಲ್ವ್‌ ಬಗ್ಗೆ ಜ್ಞಾನ ಇರುವ ವಿದ್ಯಾರ್ಥಿಗಳು ಜನವರಿ 3ರೊಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 15,000– 20,000.

ಸಂಪರ್ಕ– https://shorturl.at/yikYT.

ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌: ಸರ್ಪ್‌ಕ್ಲೈಂಬರ್‌ (Serpclimber) ಸಂಸ್ಥೆಯು ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ ಇಂಟರ್ನಿಗಳನ್ನು ಆಹ್ವಾನಿಸಿದೆ. ಇ–ಮೇಲ್‌ ಮಾರ್ಕೆಟಿಂಗ್‌, ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ನಲ್ಲಿ ಜ್ಞಾನ ಇರುವ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವ ಹಾಗೂ ಬರವಣಿಗೆಯ ಸಾಮರ್ಥ್ಯ ಇರುವವರು ಜನವರಿ 3ರೊಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್‌– ತಿಂಗಳಿಗೆ ₹ 7, 000.

ಸಂಪರ್ಕ– https://shorturl.at/pElUg.

ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಸೋಷಿಯಲ್‌ ಮೀಡಿಯಾ & ಕಮ್ಯುನಿಟಿ ಎಂಗೇಜ್‌ಮೆಂಟ್‌: ಪ್ರಸೂನ್‌ ರಾಮ್‌ದಾಸ್‌ ಕಂಪನಿಯು ಸೋಷಿಯಲ್‌ ಮೀಡಿಯಾ & ಕಮ್ಯುನಿಟಿ ಎಂಗೇಜ್‌ಮೆಂಟ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಕಂಟೆಂಟ್‌ ಮ್ಯಾನೇಜ್‌ಮೆಂಟ್‌, ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌, ಕಮ್ಯುನಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಜ್ಞಾನ ಹಾಗೂ ಇಂಗ್ಲಿಷ್‌ನಲ್ಲಿ ಸಂವಹನ ಮತ್ತು ಬರವಣಿಗೆಯ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 1 ಅರ್ಜಿ ಸಲ್ಲಿಕೆಗೆ ಕೊನೇ ದಿನ.

ಸ್ಟೈಪೆಂಡ್‌– ತಿಂಗಳಿಗೆ ₹ 10,000.

ಸಂಪರ್ಕ: https://tinyurl.com/4cet7999

ಬಿಸಿನೆಸ್‌ ಡೆವಲಪ್‌ಮೆಂಟ್‌ (ಸೇಲ್ಸ್‌): ಪೆಪಿಂಗ್‌.ಇನ್‌ (Peping.in) ಸಂಸ್ಥೆಯು ಬಿಸಿನೆಸ್‌ ಡೆವಲಪ್‌ಮೆಂಟ್‌ (ಸೇಲ್ಸ್‌) ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಪರಿಣಾಮಕಾರಿ ಸಂವಹನ, ಇಂಗ್ಲಿಷ್‌ನಲ್ಲಿ ಬರವಣಿಗೆ ಮತ್ತು ಮಾತನಾಡುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್‌ 24 ಅರ್ಜಿ ಸಲ್ಲಿಕೆಗೆ ಕಡೇ ದಿನ.

ಸಂಪರ್ಕ– https://shorturl.at/SMfq7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.