ವಿದ್ಯಾರ್ಥಿ ವೇತನ
– ಗೆಟ್ಟಿ ಚಿತ್ರ
ಜೆ.ಎನ್. ಟಾಟಾ ಎಂಡೌಮೆಂಟ್ ಸಂಸ್ಥೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಲೋನ್ ಸ್ಕಾಲರ್‌ಷಿಪ್ ನೀಡಲಿದೆ.
ಅರ್ಹತೆ: ಭಾರತದಲ್ಲಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ಪದವಿಯನ್ನು ಪೂರ್ಣಗೊಳಿಸಿದವರು ಅಥವಾ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿ ಇರುವವರು ಅರ್ಜಿ ಸಲ್ಲಿಸಬಹುದು. ವಿದೇಶದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಕೆಗೆ ಅರ್ಹರು.
ಈಗಾಗಲೇ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವವರು ಸಹ ಮೊದಲ ವರ್ಷದ ಕೊನೆಯಲ್ಲಿ ಅಥವಾ ಎರಡನೇ ವರ್ಷದ ಆರಂಭದಲ್ಲಿ ಅರ್ಜಿ ಹಾಕಬಹುದು. ಅರ್ಜಿದಾರರು ಹಿಂದಿನ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. 30 ಜೂನ್ 2026ಕ್ಕೆ ಅನ್ವಯವಾಗುವಂತೆ 45 ವರ್ಷದ ವಯೋಮಿತಿ ಮೀರಿರಬಾರದು.
ಆರ್ಥಿಕ ನೆರವು: ₹ 20 ಲಕ್ಷದವರೆಗೆ
ಅರ್ಜಿ ಸಲ್ಲಿಸಲು ಕೊನೇ ದಿನ: 15-03-2026
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್.
ಮಾಹಿತಿಗೆ: www.b4s.in/praja/JNT10
****
ಯಂಗ್ ಇಂಡಿಯಾ ಫೆಲೋಷಿಪ್
ಅಶೋಕ ವಿಶ್ವವಿದ್ಯಾಲಯ 2026–27ನೇ ಸಾಲಿನ ಯಂಗ್ ಇಂಡಿಯಾ ಫೆಲೋಷಿಪ್ (ವೈಐಎಫ್) ನೀಡುತ್ತಿದೆ. ಒಂದು ವರ್ಷದ ಅವಧಿಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಇದಾಗಿದ್ದು, ಸಾಮಾಜಿಕ ಜಾಗೃತಿ ಹೊಂದಿರುವ ಯುವ
ನಾಯಕತ್ವ ವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.
ಅರ್ಹತೆ: ಯಾವುದೇ ಪದವಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರುವವರು ಅರ್ಜಿ ಸಲ್ಲಿಸಬಹುದು. 2026ರ ಬೇಸಿಗೆಯ ವೇಳೆಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಲಿರುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು. ಸಂಬಂಧಿತ ಕೆಲಸದ ಅನುಭವ ಇದ್ದರೆ ಇನ್ನೂ ಉತ್ತಮ.
ಆರ್ಥಿಕ ಸೌಲಭ್ಯ: ಭಾಗಶಃ ಅಥವಾ ಸಂಪೂರ್ಣ ಫೆಲೋಷಿಪ್ ಸೌಲಭ್ಯ.
ಅರ್ಜಿ ಸಲ್ಲಿಸಲು ಕೊನೇ ದಿನ: 23-03-2026
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: www.b4s.in/praja/TYIF1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.