ವಿದ್ಯಾರ್ಥಿ ವೇತನ
(ಸಾಂದರ್ಭಿಕ ಚಿತ್ರ)
ಕೋಟಕ್ ಎಜುಕೇಷನ್ ಫೌಂಡೇಷನ್
ಕೋಟಕ್ ಜೂನಿಯರ್ ಸ್ಕಾಲರ್‌ಷಿಪ್ ನೀಡುತ್ತಿದೆ.
ಅರ್ಹತೆ: ಅರ್ಜಿದಾರರು 2025ರಲ್ಲಿ ತಮ್ಮ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (ಎಸ್‌ಎಸ್‌ಸಿ/ಸಿಬಿಎಸ್‌ಇ/ಐಸಿಎಸ್‌ಇ)ಶೇ85ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. 2025-26ರ ಶೈಕ್ಷಣಿಕ ವರ್ಷಕ್ಕೆ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು. ವಾರ್ಷಿಕ ಆದಾಯವು ₹ 3,20,000 ಇರಬೇಕು.
ಆರ್ಥಿಕ ಸಹಾಯ: 11 ಮತ್ತು 12ನೇ ತರಗತಿಯಲ್ಲಿ ಮಾಸಿಕ ₹ 3,500ರ ವಿದ್ಯಾರ್ಥಿವೇತನ, 21 ತಿಂಗಳವರೆಗೆ ಒಟ್ಟು₹ 73,500. ಜತೆಗೆ ಮಾರ್ಗದರ್ಶನ ಸಹಾಯ, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನ: 30-06-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/KJSP3
*****
ಮಿರೇ ಅಸೆಟ್ ಫೌಂಡೇಷನ್
ಮಿರೇ ಅಸೆಟ್ ಫೌಂಡೇಷನ್ ಭಾರತದಾದ್ಯಂತ ಪ್ರಸ್ತುತ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಅರ್ಹತೆ: ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 8,00,000 ಮೀರಬಾರದು.
ಆರ್ಥಿಕ ಸಹಾಯ: ₹50 ಸಾವಿರ.
ಅರ್ಜಿ ಸಲ್ಲಿಸಲು ಕೊನೆ ದಿನ: 20-06-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/MAFS3
**
ಅಹಿಂಸಾ ಫೆಲೋಷಿಪ್
ಅಹಿಂಸಾ ಫೆಲೋಷಿಪ್ ಪದವೀಧರರಿಗಾಗಿ ಮರ್ಸಿ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೇಷನ್ ನೀಡುತ್ತಿರುವ ಅವಕಾಶ. 8-ತಿಂಗಳ ಪೂರ್ಣಾವಧಿಯ ಈ ಫೆಲೋಷಿಪ್ ಭಾರತದಲ್ಲಿ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಆಸಕ್ತರಿಗೆ ನೀಡಲಾಗುತ್ತದೆ.
ಅರ್ಹತೆ: 2024ರ ಡಿಸೆಂಬರ್ 31ಕ್ಕೆ 21ರಿಂದ 39 ವರ್ಷಗಳ ವಯೋಮಿತಿಯಲ್ಲಿರುವ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ಅರ್ಜಿದಾರರು ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಸಂವಹನ ಕೌಶಲವಿರಬೇಕು.
ಆರ್ಥಿಕ ಸಹಾಯ: ₹20,000ದವರೆಗೆ ಮಾಸಿಕ ಸ್ಟೈಪೆಂಡ್ ಮತ್ತು ಇತರ ಪ್ರಯೋಜನಗಳು.
ಅರ್ಜಿ ಸಲ್ಲಿಸಲು ಕೊನೆ ದಿನ: 29-06-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/praja/AAFM1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.