ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಧಿಸೂಚನೆಯಿಂದ ಕೈ ಬಿಡಲಾದ ಬುಡಕಟ್ಟುಗಳು (ಡಿಎನ್‌ಟಿ), ಅಲೆಮಾರಿ ಬುಡಕಟ್ಟುಗಳು (ಎನ್‌ಟಿ) ಮತ್ತು ಅರೆ- ಅಲೆಮಾರಿ ಬುಡಕಟ್ಟು
ಗಳಿಗೆ (ಎಸ್‌ಎನ್‌ಟಿ) ಸೇರಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಪಡೆಯಲು ನೆರವಾಗಲಿದೆ.

ನೀಟ್‌, ಜೆಇಇ ಮೇನ್‌, ಕ್ಲಾಟ್‌, ಎನ್‌ಡಿಎ, ಟೋಫೆಲ್‌, ಸ್ಯಾಟ್‌, ಸಿಎ–ಸಿಪಿಟಿ, ಆರ್‌ಆರ್‌ಬಿ, ಬ್ಯಾಂಕಿಂಗ್‌, ವಿಮೆ, ರಾಜ್ಯ ಪೊಲೀಸ್‌, ಸಿಪಿಎಲ್‌ ಕೋರ್ಸ್‌ಗಳಂಥ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳು ಇದರಲ್ಲಿ ಸೇರಿವೆ. ಅರ್ಜಿದಾರರು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಪ್ರಸ್ತುತ ಓದುತ್ತಿರಬೇಕು.

ADVERTISEMENT

ಕುಟುಂಬದ ವಾರ್ಷಿಕ ಗರಿಷ್ಠ ಆದಾಯ ಮಿತಿ ₹ 8 ಲಕ್ಷ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಬೇರೆ ಯಾವುದೇ ಯೋಜನೆಯಿಂದ ಇದೇ ರೀತಿಯ ಪ್ರಯೋಜನ ಪಡೆದಿರಬಾರದು. ಎರಡು ಹಂತಗಳ (ಪ್ರಾಥಮಿಕ ಮತ್ತು ಮುಖ್ಯ) ಪರೀಕ್ಷೆಗಳಿಗೆ, ಪ್ರಾಥಮಿಕ ಹಂತದಲ್ಲಿ ಕನಿಷ್ಠ ಒಮ್ಮೆಯಾದರೂ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಒಬ್ಬ ವಿದ್ಯಾರ್ಥಿಯು ಗರಿಷ್ಠ ಎರಡು ಬಾರಿ ಈ ಯೋಜನೆಯಡಿ ಪ್ರಯೋಜನ ಪಡೆಯಬಹುದು. ಯಾವುದೇ ಕೋಚಿಂಗ್ ಸಂಸ್ಥೆಯಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ದಾಖಲಾಗಬಹುದು.

  • ಆರ್ಥಿಕ ಸಹಾಯ: ₹ 1.20 ಲಕ್ಷದವರೆಗಿನ ತರಬೇತಿ ಶುಲ್ಕ ಮತ್ತು ಹೆಚ್ಚುವರಿ ಪ್ರಯೋಜನಗಳು.

  • ಅರ್ಜಿ ಸಲ್ಲಿಸಲು ಕೊನೇ ದಿನ:  03-08-2025

  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

  • ಹೆಚ್ಚಿನ ಮಾಹಿತಿಗೆ: www.b4s.in/praja/FCDNT2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.