ADVERTISEMENT

‘ಗ್ಯಾರಂಟಿ ಕಾರ್ಡ್’ ವಿತರಣೆ ವಿರುದ್ಧ ಬಿಜೆಪಿ ದೂರು

ಪಿಟಿಐ
Published 16 ಏಪ್ರಿಲ್ 2024, 15:38 IST
Last Updated 16 ಏಪ್ರಿಲ್ 2024, 15:38 IST
ಭಾರತೀಯ ಚುನಾವಣಾ ಆಯೋಗ
ಭಾರತೀಯ ಚುನಾವಣಾ ಆಯೋಗ   

ನವದೆಹಲಿ: ಕಾಂಗ್ರೆಸ್‌ನ ‘ಮನೆ ಮನೆ ಗ್ಯಾರಂಟಿ’ ಪ್ರಚಾರ ಕಾರ್ಯಕ್ರಮವನ್ನು ‘ಲಂಚಕ್ಕೆ ಸಮನಾದ ಭ್ರಷ್ಟ ಪದ್ದತಿ’ ಎಂದು ಕರೆದಿರುವ ಬಿಜೆಪಿಯು ಮಂಗಳವಾರ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದು, ಅದನ್ನು ತಡೆಯುವಂತೆ ಒತ್ತಾಯಿಸಿದೆ.

‘ಏಪ್ರಿಲ್ 3ರಂದು ಆರಂಭಿಸಲಾಗಿರುವ ಪ್ರಚಾರ ಕಾರ್ಯಕ್ರಮದ ಮೂಲಕ ಮತದಾರರ ಮನೆಗಳಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಅವು ಪಕ್ಷದ ಭರವಸೆಗಳನ್ನು ಪಡೆಯಲು ಬೇಕಾದ ಅರ್ಜಿಗಳನ್ನು ಒಳಗೊಂಡಿವೆ. ಜತೆಗೆ ಅವು ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಅಧಿಕೃತ ಅನುಮೋದನೆಯ ವಾಗ್ದಾನದ ಸಹಿಗಳನ್ನು ಒಳಗೊಂಡಿವೆ’ ಎಂದು ಬಿಜೆಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಗ್ಯಾರಂಟಿ ಕಾರ್ಡ್ ವಿತರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.