ADVERTISEMENT

ಕಾಂಗ್ರೆಸ್ ಅವಧಿಯಲ್ಲಿ 'ಹನುಮಾನ್ ಚಾಲೀಸಾ' ಆಲಿಸುವುದು ಅಪರಾಧವಾಗಿತ್ತು:ಪಿಎಂ ಮೋದಿ

ಪಿಟಿಐ
Published 23 ಏಪ್ರಿಲ್ 2024, 7:38 IST
Last Updated 23 ಏಪ್ರಿಲ್ 2024, 7:38 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ಜೈಪುರ: ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 'ಹನುಮಾನ್ ಚಾಲೀಸಾ' ಆಲಿಸುವುದು ಅಪರಾಧವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಅಧಿಕಾರದಲ್ಲಿ ಒಬ್ಬರ ನಂಬಿಕೆಯನ್ನು ಪಾಲಿಸುವುದು ಕಷ್ಟ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ಮೋದಿ, 'ಈ ಹೇಳಿಕೆ ಕಾಂಗ್ರೆಸ್ ಹಾಗೂ 'ಇಂಡಿ' (ಇಂಡಿಯಾ) ಮೈತ್ರಿಕೂಟವನ್ನು ಕೆರಳಿಸಿದ್ದು, ಎಲ್ಲ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ' ಎಂದು ಹೇಳಿದ್ದಾರೆ.

ರಾಜಸ್ಥಾನ ಟೊಂಕ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂಬ ಸತ್ಯವನ್ನು ನಾನು ಬಹಿರಂಗ ಮಾಡಿದ್ದೇನೆ' ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಏಕೆ ಸತ್ಯಕ್ಕೆ ಹೆದರುತ್ತದೆ? ತನ್ನ ನೀತಿಗಳನ್ನು ಏಕೆ ಮರೆಮಾಚುತ್ತದೆ ? ಎರಡು ಮೂರು ದಿನಗಳ ಹಿಂದೆ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನು ಬಯಲು ಮಾಡಿದ್ದೆ. ಇದಾದ ಬಳಿಕ ಕಾಂಗ್ರೆಸ್ ಹಾಗೂ ಅದರ 'ಇಂಡಿ' ಮೈತ್ರಿಕೂಟ ಎಲ್ಲ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದೆ' ಎಂದು ಆರೋಪಿಸಿದ್ದಾರೆ.

'ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಲಾಗಿದೆ. ಸಂಪತ್ತಿನ ಎಕ್ಸ್ ರೇ ಮಾಡುವುದಾಗಿ ಅವರ ನಾಯಕರೊಬ್ಬರು ಭಾಷಣದಲ್ಲಿ ಹೇಳಿದ್ದರು. ಈ ರಹಸ್ಯವನ್ನು ಮೋದಿ ಬಯಲು ಮಾಡಿದಾಗ ಕಾಂಗ್ರೆಸ್‌ನ 'ಹಿಡನ್ ಅಜೆಂಡಾ' ಹೊರಬಿತ್ತು. ಈಗ ಭಯ ಶುರುವಾಗಿದೆ' ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.