ಧಾರವಾಡದ ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾದ ಹಣವನ್ನು ಎಸ್‌ಬಿಐ ಶಾಖೆಗೆ ಅಧಿಕಾರಿಗಳು ಬುಧವಾರ ರವಾನಿಸಿದರು
ಧಾರವಾಡ: ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಹಣದ ಕಂತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಒಯ್ದರು.
ಮನೆಯಲ್ಲಿ ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದೆ. ಹಣದ ಕಂತೆಗಳಿದ್ದ ಬ್ಯಾಗುಗಳನ್ನು ವಾಹನದಲ್ಲಿ ಸಾಗಿಸಿದರು. ಪೊಲೀಸ್ ಭದ್ರತೆ ಇತ್ತು.
ಆರ್ನಾ ರೆಸಿಡೆನ್ಸಿ ಸಮೀಪದಲ್ಲಿ ಇರುವ ಯು.ಬಿ.ಶೆಟ್ಟಿ ಗ್ರೂಪ್ ಆಫ್ ಕಂಪನೀಸ್ ಕಟ್ಟಡದಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎಷ್ಟು ಹಣ ಪತ್ತೆಯಾಗಿದೆ ಎಂದು ಈವರೆಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.