ADVERTISEMENT

ಮತದಾನಕ್ಕೂ ಮುನ್ನ ಟ್ವಿಟರ್‌ನಲ್ಲಿ #ByeByeBJP ಹ್ಯಾಶ್‌ಟ್ಯಾಗ್ ಟ್ರೆಂಡ್‌

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರುವ ವಿಡಿಯೊ, ಚಿತ್ರ, ವ್ಯಂಗ್ಯಚಿತ್ರ, ಮಾಧ್ಯಮ ವರದಿ ಹಾಗೂ ಬರಹಗಳನ್ನು ಟ್ವೀಟ್‌ ಮಾಡಿ ಈ ಹ್ಯಾಶ್‌ಟ್ಯಾಗ್‌ ಬಳಸಲಾಗುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2023, 4:56 IST
Last Updated 9 ಮೇ 2023, 4:56 IST
   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತ್ಯದ ಬೆನ್ನಲ್ಲೇ, ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಗೆ ಎದಿರೇಟು ನೀಡಿದೆ.

ಮಂಗಳವಾರ #ByeByeBJP ಎನ್ನುವ ಹ್ಯಾಶ್‌ಟ್ಯಾಗ್‌ ಬಳಸಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಟ್ವಿಟರ್‌ ಅಭಿಯಾನ ಆರಂಭಿಸಿದ್ದಾರೆ.

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರುವ ವಿಡಿಯೊ, ಚಿತ್ರ, ವ್ಯಂಗ್ಯಚಿತ್ರ, ಮಾಧ್ಯಮ ವರದಿ ಹಾಗೂ ಬರಹಗಳನ್ನು ಟ್ವೀಟ್‌ ಮಾಡಿ ಈ ಹ್ಯಾಶ್‌ಟ್ಯಾಗ್‌ ಬಳಸಲಾಗುತ್ತಿದೆ.

ADVERTISEMENT

ಬಿಜೆಪಿ ನಾಯಕರ ದ್ವೇಷ ಭಾಷಣ, ಕೋಮು ಗಲಭೆ, ನಂದಿನಿ ವಿವಾದ, ಪೇಸಿಎಂ, ರಸ್ತೆಗುಂಡಿ, ಹಿಜಾಬ್‌ ವಿವಾದ, ನಿರುದ್ಯೋಗ, ಶೇ 40 ಕಮಿಷನ್‌ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಟ್ವಿಟರ್‌ ಅಭಿಯಾನ ನಡೆಯುತ್ತಿದೆ.

ಶೇ 40 ಕಮೀಷನ್‌ ಸರ್ಕಾರಕ್ಕೆ ನನ್ನ ಮತ ಇಲ್ಲ ಎನ್ನುವ ಪೋಸ್ಟರ್ ಹಿಡಿದಿರುವ ಜನರ ವಿಡಿಯೊ ಹೆಚ್ಚು ಹರಿದಾಡುತ್ತಿದೆ.

ರಾಜ್ಯ ಕಾಂಗ್ರೆಸ್‌ ಘಟಕ, ಭಾರತೀಯ ಯುವ ಕಾಂಗ್ರೆಸ್, ಕೇರಳ ಕಾಂಗ್ರೆಸ್‌ ಸೇವಾದಳ, ಜಾನ್ಸಿ ಕಾಂಗ್ರೆಸ್‌ ಸೇವಾದಳ, ದೇಶದ ಕಾಂಗ್ರೆಸ್‌ ನಾಯಕರು, ವಕ್ತಾರರು ಟ್ವೀಟ್‌ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.