ADVERTISEMENT

ಜಮ್ಮು–ಕಾಶ್ಮೀರ: 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 3:02 IST
Last Updated 19 ಏಪ್ರಿಲ್ 2019, 3:02 IST
ಚಿತ್ರ: ಎಎನ್‌ಐ ಟ್ವಿಟರ್
ಚಿತ್ರ: ಎಎನ್‌ಐ ಟ್ವಿಟರ್   

ಶ್ರೀನಗರ: ರಾಜ್ಯದಲ್ಲಿ ಗುರುವಾರ ನಡೆದ ಎರಡನೇ ಹಂತದಲೋಕಸಭಾ ಚುನಾವಣೆಯಲ್ಲಿ90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಶ್ರೀನಗರ ಕ್ಷೇತ್ರದ50 ಮತಗಟ್ಟೆ ಕೇಂದ್ರಗಳು ತೆರೆದಿದ್ದರೂಜನರು ಮತ ಹಾಕಲು ಬಾರದೆ ಶೂನ್ಯ ಮತದಾನ ದಾಖಲಾಗಿದೆ.

ಈದ್ಗಾ, ಖನ್ಯಾರ್‌, ಹಬ್ಬಾ ಕದಲ್‌ ಸೇರಿದಂತೆ ಹಲವೆಡೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ADVERTISEMENT

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್ ಮತ ಚಲಾಯಿಸಿದರು. ಸೋನವಾರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ, ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಒಂದಂಕಿ ದಾಟಿರಲಿಲ್ಲ. ಮತದಾನದ ಅಂತ್ಯದ ವೇಳೆಗೆ ಈದ್ಗಾದಲ್ಲಿ ಶೇ.3.3 ರಷ್ಟು ಮತದಾನವಾಗಿದೆ. ಉಳಿದಂತೆ ಸೋನಾವರ್‌ನಲ್ಲಿ ಶೇ. 12 ರಷ್ಟು ಮತದಾನ ದಾಖಲಾಗಿದೆ.

ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಅತಿಕಡಿಮೆ ಮತದಾನವಾಗಿದೆ. 2014ರ ಚುನಾವಣೆಯಲ್ಲಿ ಶೇ 25.86ರಷ್ಟು ಇದ್ದ ಮತದಾನ ಈ ಬಾರಿ ಶೇ 12.43ಕ್ಕೆ ಕುಸಿದಿದೆ. ಪ್ರತ್ಯೇಕವಾದಿಗಳು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ ಉಧಂಪುರ ಕ್ಷೇತ್ರದಲ್ಲಿ ಶೇ 58ಕ್ಕಿಂತ ಹೆಚ್ಚು ಮತ ದಾಖಲಾಗಿವೆ.

ಶ್ರೀನಗರ ಸಂಸದೀಯ ಕ್ಷೇತ್ರದ ಭಾಗವಾಗಿರುವ ಗಂಡರ್‌ಬಾಲ್‌ ಜಿಲ್ಲೆಯ 27 ಮತಗಟ್ಟೆಗಳಲ್ಲಿ ದಿನ ಅಂತ್ಯಕ್ಕೆ ಮತದಾನ ದಾಖಲಾಗಲಿಲ್ಲ.

ಕಾಂಗ್ರೆಸ್‌ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷಗಳುಮೈತ್ರಿ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.