ADVERTISEMENT

ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಗೆ ಪಾದಪೂಜೆ ಸಲ್ಲಿಸಿದ ಎ.ಮಂಜು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 11:54 IST
Last Updated 25 ಮಾರ್ಚ್ 2019, 11:54 IST
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿ ಪಾದ ತೊಳೆದರು.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿ ಪಾದ ತೊಳೆದರು.   

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಯ ಪಾದಪೂಜೆ ಮಾಡಿದರು.

ನಗರದ ಮಟನ್ ಮಾರ್ಕೆಟ್ ವೃತ್ತದಲ್ಲಿರುವ ಚಂದ್ರು ಹಾಗೂ ಅಶ್ವಿನಿ ದಂಪತಿಯ ಪಾದ ತೊಳೆದು ಪೂಜೆ ನೆರವೇರಿಸಿದರು. ಈ ವೇಳೆ ಶಾಸಕರಾದ ಪ್ರೀತಂ ಗೌಡ, ಬೆಳ್ಳಿ ಪ್ರಕಾಶ್ ಸಾಥ್ ನೀಡಿದರು.

ಬಳಿಕ ಮಾತನಾಡಿದ ಮಂಜು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಇದೇ ರೀತಿ ಪೌರಕಾರ್ಮಿಕರ ಪಾದ ತೊಳೆದಿದ್ದರು. ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇನೆ. ಜನರಿಗೆ ಸ್ವಚ್ಚತೆ ಬಗ್ಗೆ ಹರಿವು ಮೂಡಿಸುವ ಸಂದೇಶ
ಇದಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದ ತೊಳೆದಿರುವುದನ್ನು ಟಿ.ವಿ.ಯಲ್ಲಿ ನೋಡಿದ್ದೇವು. ಆದರೆ, ಮಂಜು ಅವರು ಮನೆಗೆ ಬಂದು ‍ಪಾದ ಪೂಜೆ ಮಾಡಿದ್ದು ಸಾಕಷ್ಟು ಮುಜುಗರ ಉಂಟಾದರೂ ನಂತರ ಸಂತೋಷವಾಯಿತು’ ಎಂದು ಚಂದ್ರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.