ನಟ ಅಮೀರ್ ಖಾನ್
(ಪಿಟಿಐ ಚಿತ್ರ)
‘ಸಿತಾರೆ ಜಮೀನ್ ಪರ್’ ಹಿಂದಿ ಸಿನಿಮಾದ ಒಟಿಟಿ ಬಿಡುಗಡೆಗೆ 125 ಕೋಟಿ ರೂಪಾಯಿಯ ಒಪ್ಪಂದಕ್ಕೆ ವೇದಿಕೆಯೊಂದು ಮುಂದಾಗಿದ್ದ ಸಂಗತಿಯನ್ನು ಅಮೀರ್ ಖಾನ್ ಹೇಳಿಕೊಂಡಿದ್ದಾರೆ. ಅಂತಹ ಅವಕಾಶ ಬಂದರೂ ಅವರು ಒಪ್ಪದೇ ಇದ್ದುದಕ್ಕೆ ಕಾರಣವಿದೆ.
‘ಚಿತ್ರಮಂದಿರದಲ್ಲೇ ಜನ ಸಿನಿಮಾ ನೋಡಬೇಕು ಎಂದು ಬಯಸುವವನು ನಾನು. ಅಲ್ಲಿ ಕತ್ತಲ ಸಭಾಭವನದಂತಹ ವಾತಾವರಣದಲ್ಲಿ ಸಿಗುವ ಸಿನಿಮಾ ಅನುಭವ ಪುಟ್ಟ ಪರದೆಗಳಲ್ಲಿ ಸಿಗಲಾರದು. ಅದೊಂದೇ ಕಾರಣಕ್ಕೆ ಒಟಿಟಿ ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡು ಎಂಟು ವಾರಗಳಲ್ಲೇ ಒಟಿಟಿಗೆ ಬಂದರೆ ಮಜಾ ಇರಲಾರದು. ಎರಡು ತಿಂಗಳೊಳಗೆ ಮನೆಯೊಳಗೇ ಸಿನಿಮಾ ಬರುತ್ತದೆ ಎಂದರೆ ಎಷ್ಟೋ ಜನ ಚಿತ್ರಮಂದಿರಗಳಿಗೆ ಬರಲಾರರು. ಅದಕ್ಕೇ ನಾನು ಒಟಿಟಿ ಒಪ್ಪಂದವನ್ನು ಮಾಡಿಕೊಳ್ಳಲಿಲ್ಲ’ ಎಂದು ಅಮೀರ್ ಖಾನ್ ಸ್ಪಷ್ಟಪಡಿಸಿದರು.
ಇದುವರೆಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ₹ 250 ಕೋಟಿ ಹಣ ಸಂಗ್ರಹಿಸಿದೆ. ಒಟಿಟಿಯಲ್ಲಿ ಬರುವ ನಿರೀಕ್ಷೆ ಮೊದಲೇ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಅಮೀರ್. ಈಗ ಹಣ ಕೊಟ್ಟು ಯೂಟ್ಯೂಬ್‌ನಲ್ಲಿ ಪ್ರೇಕ್ಷಕರು ನೋಡಬಹುದಾದ ರೀತಿಯಲ್ಲಿ ‘ಸಿತಾರೆ ಜಮೀನ್ ಪರ್’ ಅನ್ನು ಅವರು ಬಿಡುಗಡೆ ಮಾಡಿಸಿದ್ದಾರೆ. ಈ ಮೂಲಕ ಇನ್ನೊಂದು ಸಾಹಸಕ್ಕೆ ಅವರು ಕೈಹಾಕಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.