
ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ಕನ್ನಡದ ಹಿರಿಯ ನಟಿ ಅವಿನಾಶ್, ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
‘ಶಿವಣ್ಣನ ಜೊತೆ ‘ಚಿಗುರಿದ ಕನಸು‘ ಚಿತ್ರ ಮಾಡುವಾಗ ಅಪ್ಪು ಪರಿಚಯ ಆಗಿತ್ತು. ಪುನೀತ್ ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸಿರುವ ‘ಅಪ್ಪು’ ಚಿತ್ರದಲ್ಲಿ ರಕ್ಷಿತಾ ಅವರ ತಂದೆ ಪಾತ್ರವನ್ನು ತೆಲುಗು ನಟರಿಂದ ಮಾಡಿಸಬೇಕೆಂದು ಈ ಚಿತ್ರದ ನಿರ್ದೇಶಕ ಪುರಿ ಜಗನಾಥ್ ಯೋಚಿಸಿದ್ದರು. ಆದರೆ ರಾಜ್‌ಕುಮಾರ್ ಅವರು ಆ ಪಾತ್ರವನ್ನು ಅವಿನಾಶ್ ಮಾಡಬೇಕು ಎಂದಿದ್ದರು’
‘ರಾಜ್‌ಕುಮಾರ್ ಅವರು ಓದಿದ್ದು ಕಡಿಮೆ ಆದರೂ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಓದಿದವರನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ. ಅಣ್ಣಾವ್ರು ಯಾವುದೇ ಸಂದರ್ಭದಲ್ಲಿ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅದೇ ಸರಳತೆಯನ್ನು ನಾನು ಪುನೀತ್ ಅವರಲ್ಲಿ ಕಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
‘ಅಪ್ಪು’ ಚಿತ್ರದ ಮೇಲೆ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ನಂಬಿಕೆ ಇರಲಿಲ್ಲ. ಆದರೆ ನಾನು ಪುನೀತ್ ರಾಜ್‌ಕುಮಾರ್‌ಗೆ ಅವರ ಮೊದಲ ಸಿನಿಮಾದಲ್ಲೇ ಹೇಳಿದ್ದೆ. ನೀವು ಅಭಿಮಾನಿಗಳ ಮನಸ್ಸು ಗೆದ್ದು ಬಿಟ್ಟಿದ್ದೀರಾ.. ಚಿತ್ರರಂಗದಲ್ಲಿ ಶಾಶ್ವತವಾಗಿ ಇರುತ್ತೀರಾ ಎಂದಿದ್ದೆ. ಅವರಿಗೆ ತುಂಬಾ ಬಿಲ್ಡಪ್ ಕೊಡೋದು ಇಷ್ಟ ಆಗುತ್ತಿರಲಿಲ್ಲ. ಸೂಪರ್ ಸ್ಟಾರ್ ಆದರೂ ಅಹಂ ಇರಲಿಲ್ಲ’ ಎಂದು ಅಪ್ಪು ಸರಳತೆ ಬಗ್ಗೆ ಕೊಂಡಾಡಿದ್ದಾರೆ.
‘ಅಪ್ಪು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಹೊಡೆಯುವ ದೃಶ್ಯಕ್ಕೆ ಐದಾರು ಟೇಕ್ ತೆಗೆದುಕೊಂಡಿದ್ದೀನಿ. ಅದಕ್ಕೆ ಕಾರಣ ಅಪ್ಪು ಮೇಲೆ ಅಪಾರ ಪ್ರೀತಿ’ ಎಂದಿದ್ದಾರೆ.
‘ಈಗಿನ ಯುವನಟರು ಅಪ್ಪು ಸರಳತೆಯನ್ನು ತಿಳಿದುಕೊಳ್ಳಬೇಕು. ಯಾರು ಬೇಕಾದರೂ ದೊಡ್ಡ ನಟ ಆಗುತ್ತಾರೆ. ಆದರೆ ಅಪ್ಪು ಅವರು ಎಲ್ಲರನ್ನೂ ಗೌರವಿಸುವ ಪ್ರೀತಿಸುವ ವ್ಯಕ್ತಿ ಆಗಿದ್ದರು’ ಎಂದು ಪುನೀತ್ ರಾಜ್‌ಕುಮಾರ್ ಜತೆಗಿನ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.