ADVERTISEMENT

ಥ್ರಿಲ್ಲರ್ ಕಥೆ ಹೇಳಲು ಶಾಮ್ ಸಿಂಗಾ ರಾಯ್ ಆಗಿ ಬರಲಿದ್ದಾರೆ ನಾನಿ: ಟೀಸರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 5:44 IST
Last Updated 18 ನವೆಂಬರ್ 2021, 5:44 IST
ಶಾಮ್ ಸಿಂಗಾ ರಾಯ್ ಚಿತ್ರದ ಪೋಸ್ಟರ್
ಶಾಮ್ ಸಿಂಗಾ ರಾಯ್ ಚಿತ್ರದ ಪೋಸ್ಟರ್   

ಬೆಂಗಳೂರು: ನಟ ನಾನಿ ಅವರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ‘ಶ್ಯಾಮ್ ಸಿಂಗಾ ರಾಯ್’ ಡಿಸೆಂಬರ್ 24 ಕ್ಕೆ ತೆರೆಗೆ ಬರಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಇಂದು ಟೀಸರ್ ಬಿಡುಗಡೆ ಮಾಡಿದೆ.

ನಿಹಾರಿಕಾ ಎಂಟರ್‌ಟೈನ್‌ಮೆಂಟ್ ಯೂಟ್ಯೂಬ್‌ ಚಾನೆಲ್‌ನಲ್ಲಿ ತೆಲುಗು, ಕನ್ನಡ, ಹಿಂದಿ ಹಾಗೂ ತಮಿಳು ಟೀಸರ್ ಲಭ್ಯವಿದೆ.

ಶ್ಯಾಮ್ ಸಿಂಗಾ ರಾಯ್ ಇದೊಂದು ಪ್ಯಾನ್ಇಂಡಿಯಾ ಸಿನಿಮಾವಾಗಿದ್ದು ನಾನಿ, ಸಾಯಿ ಪಲ್ಲವಿ, ಕೀರ್ತಿ ಶೆಟ್ಟಿ ಹಾಗೂ ಮಡೊನ್ನಾ ಸೆಬಾಸ್ಟಿಯನ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ.

ADVERTISEMENT

ಈ ಸಿನಿಮಾ ಸೂಪರ್ ನ್ಯಾಚುರಲ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದ್ದು, ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಈ ಹಿಂದೆ ‘ದಿ ಎಂಡ್’ ಹಾಗೂ ವಿಜಯ್ ದೇವರಕೊಂಡ ಅಭಿನಯದ ‘ಟ್ಯಾಕ್ಸಿವಾಲಾ’ ಎಂಬ ಸೂಪರ್ ನ್ಯಾಚುರಲ್ ಕಥೆ ಹೊಂದಿದ್ದ ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕಿರ್ತಿಯನ್ ಅವರು ಶ್ಯಾಮ್ ಸಿಂಗಾ ರಾಯ್ ನಿರ್ದೇಶಿಸಿದ್ದಾರೆ. ‘ನಿಹಾರಿಕಾ ಎಂಟರ್‌ಟೈನ್‌ಮೆಂಟ್’ ಅಡಿ ವೆಂಕಟ್ ಎಸ್ ಬೋಯನಪಲ್ಲಿ ಅವರು ಸಿನಿಮಾಕ್ಕೆ ಹಣ ಹಾಕಿದ್ದಾರೆ.

ಇನ್ನು ಈ ಚಿತ್ರದ ಕನ್ನಡ ಟೀಸರ್ ಹಂಚಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, ‘ಅದ್ಭುತ ಪರದೆಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಟೀಸರ್‌ನಲ್ಲಿನ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ. ಎಂದಿನಂತೆ ಬೆರುಗುಗೊಳಿಸುವ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಲು ಕಾತರನಾಗಿದ್ದೇನೆ‘ ಎಂದು ಟ್ವೀಟ್ ಮಾಡಿ ಶುಭ ಕೋರಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.