
ಅಲ್ಲು ಅರ್ಜುನ್, ರಾಮ್ ಚರಣ್
ಚಿತ್ರ: ಇನ್‌ಸ್ಟಾಗ್ರಾಂ
ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗಾಗಿ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ ದಂಪತಿ ಕೂಡ ಹೋಗಿದ್ದರು. ಆದರೆ ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲು ಅರ್ಜುನ್, ರಾಮ್ ಚರಣ್
ಅಷ್ಟಕ್ಕೂ ಆಗಿದ್ದೇನು?
ನಟ ರಾಮ್ ಚರಣ್ ಅವರು ಸದ್ಯ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದಾರೆ. ಮಾಲೆ ಧರಿಸಿದ ರಾಮ್ ಚರಣ್ ಅವರು ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ಕಾಕ್‌ಟೈಲ್ ಪಾರ್ಟಿ ಹೋಗಿದ್ದಾರೆ. ಹೀಗಾಗಿ ನೆಟ್ಟಿಗರು ಹಾಗೂ ಅಯ್ಯಪ್ಪ ಸ್ವಾಮಿ ಗರಂ ಆಗಿದ್ದಾರೆ. ರಾಮ್ ಚರಣ್ ಅವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಎಣ್ಣೆ, ಮಾಂಸ ಪದಾರ್ಥಗಳು ಇರುವ ಸ್ಥಳಕ್ಕೆ ಹೋಗಿದ್ದಾರೆ, ಯಾಕೆ ಹೋಗಬೇಕಿತ್ತು? ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಾರ್ಟಿಯಲ್ಲಿ ರಾಮ್ ಚರಣ್ ಭಾಗಿಯಾಗಿದ್ದ ವಿಡಿಯೊಗಳು ಟ್ರೋಲ್ ಆಗುತ್ತಿವೆ. ವಿಡಿಯೊದಲ್ಲಿ ರಾಮ್ ಚರಣ್ ಅವರು ಬರಿಗಾಲಿನಲ್ಲಿ ಪಾರ್ಟಿಗೆ ಬಂದಿದ್ದರು.
ಆ ವಿಡಿಯೊ ಬಗ್ಗೆ ಅಲ್ಲು ಸಿರೀಶ್, ‘ಪಾರ್ಟಿ ಮಾಡುವ ಮೊದಲೇ ಸ್ವಾಮಿ ಬಂದು, ನಮಗೆ ಶುಭಾಶಯ ತಿಳಿಸಿ ಹೊರಟುಹೋದರು. ಅಯ್ಯಪ್ಪಸ್ವಾಮಿಗೆ ಅವರ ಸಮರ್ಪಣೆ ತುಂಬಾ ಇಷ್ಟವಾಯಿತು’ ಎಂದು ಬರೆದುಕೊಂಡಿದ್ದಾರೆ.
ಅಯ್ಯಪ್ಪ ಮಾಲೆ ಧರಿಸುವ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಅಯ್ಯಪ್ಪ ದೀಕ್ಷೆ (41 ದಿನಗಳ ಆಧ್ಯಾತ್ಮಿಕ ಅಭ್ಯಾಸ) ಯನ್ನು ಅನುಸುತ್ತಾರೆ. ಆ ಅವಧಿಯಲ್ಲಿ ಭಕ್ತರು ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಅವರು ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ. ಬರಿಗಾಲಿನಲ್ಲಿ ನಡೆಯುತ್ತಾರೆ. ನೆಲದ ಮೇಲೆ ಮಲಗುತ್ತಾರೆ ಮತ್ತು ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ. ಈ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮದ್ಯವನ್ನು ಸಂಪೂರ್ಣವಾಗಿ ತ್ಯಜಿದುತ್ತಾರೆ. ನಿಯಮಿತ ಪೂಜೆ, ಧ್ಯಾನ ಮತ್ತು ಮನಸ್ಸಿನ ನಿಯಂತ್ರಣವು ಉಪವಾಸದ ಪ್ರಮುಖ ಅಂಶಗಳಾಗಿವೆ.
ಆರ್‌ಆರ್‌ಆರ್ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ರಾಮ್ ಚರಣ್ ಈ ಸಂಪ್ರದಾಯವನ್ನು ಅನುಸರಿಸಿದ್ದರು.
ಅಲ್ಲು ಅರ್ಜುನ್, ರಾಮ್ ಚರಣ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.