ADVERTISEMENT

ಗಾಯಕನಾದ ಸಲ್ಮಾನ್‌ ಖಾನ್‌; ಇಲ್ಲಿದೆ 'ಡ್ಯಾನ್ಸ್‌ ವಿತ್‌ ಮಿ' ಟೀಸರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2022, 10:56 IST
Last Updated 28 ಜನವರಿ 2022, 10:56 IST
ಸಲ್ಮಾನ್‌ ಖಾನ್‌–ಸಾಂದರ್ಭಿಕ ಚಿತ್ರ
ಸಲ್ಮಾನ್‌ ಖಾನ್‌–ಸಾಂದರ್ಭಿಕ ಚಿತ್ರ   

ನಟ ಸಲ್ಮಾನ್‌ ಖಾನ್ ತಮ್ಮ ಹೊಸ ಮ್ಯೂಸಿಕ್‌ ವಿಡಿಯೊದ ಟೀಸರ್‌ ಹಂಚಿಕೊಂಡಿದ್ದಾರೆ. ಸಾಜಿದ್‌ ಖಾನ್‌ ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ಸ್ವತಃ ಸಲ್ಮಾನ್‌ ಖಾನ್‌ ಹಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 'ಡ್ಯಾನ್ಸ್‌ ವಿತ್‌ ಮಿ' ಟೀಸರ್‌ ನೋಡಿರುವ ಅಭಿಮಾನಿಗಳು, ಸಲ್ಲು ಬಾಯ್‌ ಹೊಸ ಅವತಾರಕ್ಕೆ ಸಲಾಂ ಹೊಡೆದಿದ್ದಾರೆ.

23 ಸೆಕೆಂಡ್‌ಗಳ ಪುಟ್ಟ ಟೀಸರ್‌ ವಿಡಿಯೊದಲ್ಲಿ ಸಲ್ಮಾನ್‌ ಖಾನ್‌ ಎಂಟ್ರಿ, ತಾಳಕ್ಕೆ ಹೆಜ್ಜೆ ಹಾಕಿರುವುದನ್ನು ಕಾಣಬಹುದು. ಕೊನೆಯಲ್ಲಿ 'ಹಲೋ, ಕಮ್‌ ಡ್ಯಾನ್ಸ್‌ ವಿತ್‌ ಮಿ' ಎಂದು ಆಹ್ವಾನ ನೀಡಿದ್ದಾರೆ.

ADVERTISEMENT

'ನಿಮ್ಮೊಂದಿಗೆ ಡ್ಯಾನ್ಸ್‌ ಮಾಡಲು ಅವಕಾಶ ಕೊಡಿ...' ಎಂದು ಅಭಿಯಾನಿಯೊಬ್ಬರು ಕಾಮೆಂಟ್‌ ಮಾಡಿದ್ದರೆ, ಮತ್ತೊಬ್ಬರು 'ಇವರು ದಿನದಿಂದ ದಿನಕ್ಕೆ ಮತ್ತಷ್ಟು ಹ್ಯಾಂಡ್ಸಮ್ ಆಗ್ತಿದ್ದಾರೆ' ಎಂದಿದ್ದಾರೆ. ಕೆಲವರು 'ಡಿಂಕ್‌ಚಕ್‌ ಪೂಜಾ' ಅವರನ್ನೂ ನೆನಪು ಮಾಡಿಕೊಂಡಿದ್ದಾರೆ.

ಕಳೆದ ವಾರ ಸಲ್ಮಾನ್‌ ಖಾನ್‌ ಅಭಿನಯಿಸಿರುವ ಮ್ಯೂಸಿಕ್‌ ವಿಡಿಯೊ 'ಮೇ ಚಲಾ' ಬಿಡುಗಡೆಯಾಗಿದೆ. ಆ ಹಾಡಿನ ವಿಡಿಯೊ 'ಅಂತಿಮ್‌: ದಿ ಫೈನಲ್‌ ಟ್ರುಥ್‌' ಸಿನಿಮಾಗಾಗಿ ಚಿತ್ರೀಕರಿಸಲಾಗಿತ್ತು. ಆದರೆ, ಸಿನಿಮಾದಲ್ಲಿ ಆ ಹಾಡನ್ನು ಎಡಿಟ್ ಮಾಡಲಾಗಿತ್ತು. ಮೇ ಚಲಾ ಬಿಡುಗಡೆಯಾಗಿ ಒಂದು ವಾರದಲ್ಲಿ 2.77 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

ಸಲ್ಮಾನ್‌ ಖಾನ್‌ ಅವರ ಮುಂದಿನ ಸಿನಿಮಾ ಕತ್ರೀನಾ ಕೈಫ್‌ ಜೋಡಿಯಾಗಿರುವ 'ಟೈಗರ್‌ 3'.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.