ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ತೇಜ್‌– ನಟಿ ಲಾವಣ್ಯ ತ್ರಿಪಾಠಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 8:38 IST
Last Updated 2 ನವೆಂಬರ್ 2023, 8:38 IST
<div class="paragraphs"><p>ವರುಣ್ ತೇಜ್‌– ಲಾವಣ್ಯ ತ್ರಿಪಾಠಿ  </p></div>

ವರುಣ್ ತೇಜ್‌– ಲಾವಣ್ಯ ತ್ರಿಪಾಠಿ

   

ಬೆಂಗಳೂರು: ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಟಲಿಯ ಟಸ್ಕನಿನಲ್ಲಿನ ಬೋರ್ಗೊ ಸ್ಯಾನ್ ಫೆಲಿಸ್ ಖಾಸಗಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಂಪ್ರದಾಯದ ಪ್ರಕಾರ ಲಾವಣ್ಯ ಅವರು ವರುಣ್ ತೇಜ್‌ ಅವರನ್ನು ವರಿಸಿದ್ದಾರೆ.

ADVERTISEMENT

ಲಾವಣ್ಯ ಕೆಂಪು ಬಣ್ಣದ ಕಾಂಚಿಪುರಂ ಸೀರೆಯುಟ್ಟು ಮಿಂಚಿದ್ದರೆ, ವರುಣ್‌ ಗೋಲ್ಡನ್‌– ವೈಟ್‌ ಬಣ್ಣದ ಶೇರ್ವಾನಿಯಲ್ಲಿ ಗಮನ ಸೆಳೆದಿದ್ದಾರೆ. ಈ ಜೋಡಿಗೆ ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಉಡುಗೆಗಳನ್ನು ಸಿದ್ಧಪಡಿಸಿದ್ದಾರೆ.

ವರುಣ್ ತೇಜ್‌ ದಂಪತಿಯ ಮದುವೆ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನವ ಜೋಡಿಗೆ ಸಿನಿರಂಗದ ಅನೇಕ ನಟ– ನಟಿಯರು ಶುಭ ಕೋರಿದ್ದಾರೆ.

ಮದುವೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರ್ಮಾ ತೇಜ್ ಸೇರಿದಂತೆ ಮೆಗಾ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಷ್ಟೇ ಪಾಲ್ಗೊಂಡಿದ್ದರು. ಇದೇ ವರ್ಷ ಜೂನ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.