ADVERTISEMENT

ದಶಕದ ಸಿನಿ ಪಯಣದ ಸಂಭ್ರಮ: ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಅಮೃತಾ ಅಯ್ಯಂಗಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2026, 7:01 IST
Last Updated 17 ಫೆಬ್ರುವರಿ 2026, 7:01 IST
<div class="paragraphs"><p>ನಟಿ ಅಮೃತಾ ಅಯ್ಯಂಗಾರ್</p></div>

ನಟಿ ಅಮೃತಾ ಅಯ್ಯಂಗಾರ್

   

ಚಿತ್ರ: ಇನ್‌ಸ್ಟಾಗ್ರಾಂ

ಚಂದನವನದ ನಟಿ ಅಮೃತಾ ಅಯ್ಯಂಗಾರ್ ಅವರು ಹತ್ತು ವರ್ಷಗಳ ಸಿನಿ ಪಯಣದ ಸಂಭ್ರಮದಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ADVERTISEMENT

ಕನ್ನಡ ಚಿತ್ರರಂಗದಲ್ಲಿ ಕಳೆದ 10 ವರ್ಷಗಳಿಂದ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕನ್ನಡದ ಕರೀನಾ ಕಪೂರ್ ಎಂದೇ ಖ್ಯಾತಿ ಪಡೆದಿರುವ ನಟಿ ಅಮೃತಾ ಅಯ್ಯಂಗಾರ್ ಈಗ ಹತ್ತು ವರ್ಷಗಳ ಸಿನಿ ಪಯಣದ ಕುರಿತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ಈ ಪ್ರಯಾಣಕ್ಕೆ ಒಂದು ದಶಕದ ಇತಿಹಾಸವಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇಂದಿಗೆ ನಾನು 10 ವರ್ಷಗಳನ್ನು ಪೂರೈಸಿದ್ದೇನೆ ಎಂದು ಅನಿಸುತ್ತಿಲ್ಲ. ಇದೆಲ್ಲ ನಿಮ್ಮೆಲ್ಲರಿಂದಾಗಿ ಸಾಧ್ಯವಾಗಿದೆ. ನಾನು ನಿರ್ವಹಿಸಿದ ಪಾತ್ರಗಳ ಬಗ್ಗೆ ನಿರಂತರ ಬೆಂಬಲ ಮತ್ತು ಪ್ರೀತಿ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇಷ್ಟೊಂದು ಪ್ರೀತಿಯನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

‘ಈ ಪ್ರಯಾಣವು ನನಗೆ ಸಾಕಷ್ಟು ಶಕ್ತಿ ಮತ್ತು ಧೈರ್ಯವನ್ನು ನೀಡಿದೆ. ಆದರೂ ನಾನು ಇನ್ನೂ ಸ್ಥಿರವಾಗಿದ್ದೇನೆ ಮತ್ತು ನನ್ನಲ್ಲಿರುವ ಸಣ್ಣ ವಿಷಯಗಳಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಎಲ್ಲಾ ನಿರ್ದೇಶಕರು, ನಿರ್ಮಾಪಕರು, ಸಹ-ನಟರು, ಛಾಯಾಗ್ರಾಹಕರು, ಸಂಪಾದಕರು ಮತ್ತು ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ದೊಡ್ಡ ಧನ್ಯವಾದಗಳು. ನೀವೆಲ್ಲರು ಇರದೇ ಇದ್ದರೆ ಈ ಪ್ರಯಾಣ ಅದ್ಭುತವಾಗುತ್ತಿರಲಿಲ್ಲ. ಧನ್ಯವಾದಗಳು ವಿತ್ ಲವ್ ಅಮೃತಾ’ ಎಂದು ನಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ಅಮೃತಾ ಅಯ್ಯಂಗಾರ್ ತಾವು ನಟಿಸಿರುವ, ಆ ಸಿನಿಮಾಗಳಿಗೆ ಬಂದ ಪ್ರಶಸ್ತಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದ ಫೋಟೊಗಳು, ಸಿನಿಮಾದ ಪೋಸ್ಟರ್‌ಗಳು, ಪ್ರಶಸ್ತಿ ಪಡೆದ ಚಿತ್ರಗಳು, ಅಭಿಮಾನಿಗಳ ಜೊತೆಗಿನ ಪಯಣವನ್ನು ಪೋಸ್ಟ್‌ ಮಾಡಿದ್ದಾರೆ.

ಅಮೃತಾ ಅಯ್ಯಂಗಾರ್ ಅವರು 2017ರಲ್ಲಿ ‘ಸಿಂಹ ಹಾಕಿದ ಹೆಜ್ಜೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ‘ಅನುಷ್ಕಾ’, ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’, ‘ಶಿವಾರ್ಜುನ’, ‘ಬಡವ ರಾಸ್ಕಲ್’, ‘ಫ್ಯಾಮಿಲಿ ಪ್ಯಾಕ್’, ‘ವಿಂಡೋ ಸೀಟ್’, ‘ಗುರುದೇವ ಹೊಯ್ಸಳ’, ‘ಅಬ್ಬಬ್ಬಾ’, ‘ಜೀಬ್ರಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ನಟಿ ಮೂರು ಸಿನಿಮಾಗಳಲ್ಲಿ ಸಕ್ರಿಯಾಗಿದ್ದಾರೆ. ‘ಹಲ್ಕಾ ಡಾನ್’, ‘ಫಾದರ್’ ಸೇರಿದಂತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅಮೃತಾ ನಟಿಸುತ್ತಿದ್ದಾರೆ. ನಟಿಯ ಸಿನಿ ಪಯಣದ ಪೋಸ್ಟ್‌ಗೆ ಅಭಿಮಾಗಳು ಕೂಡ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.