ಕೀರ್ತಿ ಸುರೇಶ್ ಹಾಗೂ ಆ್ಯಂಟನಿ ಥಟ್ಟಿಲ್ ವಿವಾಹ ಸಮಾರಂಭ
ಮಹಾನಟಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯ ಆ್ಯಂಟನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ
ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಹಿಂದೂ ಸಂಪ್ರದಾಯದಂತೆ ಹೋಮ, ಹವನ ಹಾಗೂ ಸಪ್ತಪದಿ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ
ಆ್ಯಂಟನಿ ಥಟ್ಟಿಲ್ ಅವರು ದುಬೈನಲ್ಲಿ ಉದ್ಯಮ ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು ಎಂದೆನ್ನಲಾಗಿದೆ
ರೇಷ್ಮೆ ಸೀರೆ, ಪಂಚೆ, ಆ್ಯಂಟಿಕ್ ಆಭರಣಗಳು, ಸುಗಂಧಬರಿತ ತರಹೇವಾರಿ ಹೂವುಗಳ ಅಲಂಕಾರದೊಂದಿಗೆ ಈ ಜೋಡಿ ಹಸೆಮಣೆ ಏರಿದರು
ಕೇರಳದ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಕುಳಿತ ಕೀರ್ತಿ ಸುರೇಶ್ ಅವರಿಗೆ ಆ್ಯಂಟನಿ ನಿಂತು ತಾಳಿ ಕಟ್ಟಿದ ಸಂರ್ಭದಲ್ಲಿ ಸಂಭ್ರಮ ಮೇಳೈಸಿತು
ಮದುವೆ ಕಾರ್ಯಕ್ರಮದ ನಂತರ ಕೂಲಿಂಗ್ ಗ್ಲಾಸ್ ಧರಿಸಿದ ಈ ಜೋಡಿ ತಮ್ಮ ನೆಚ್ಚಿನ ನಾಯಿಯೊಂದಿಗೆ ಪೋಸು ನೀಡಿ ಸಂಭ್ರಮಿಸಿದ್ದಾರೆ. ಮದುವೆ ಸಂಭ್ರಮದ ಚಂದದ ಚಿತ್ರಗಳನ್ನು ಕಿರ್ತಿ ಸುರೇಶ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.