ADVERTISEMENT

‘ಮಿಮಿ’ ಮುಗಿಯುತ್ತಲೇ 15 ಕೆಜಿ ತೂಕ ಕಳೆದುಕೊಂಡ ಮಮ್ಮಿ ಕೃತಿ ಸನೊನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 12:48 IST
Last Updated 8 ಆಗಸ್ಟ್ 2021, 12:48 IST
ನಟಿ ಕೃತಿ ಸನೋನ್- ಇನ್‌ಸ್ಟಾಗ್ರಾಂ ಫೋಸ್ಟ್
ನಟಿ ಕೃತಿ ಸನೋನ್- ಇನ್‌ಸ್ಟಾಗ್ರಾಂ ಫೋಸ್ಟ್    

ಬೆಂಗಳೂರು: ಬಾಡಿಗೆ ತಾಯಿಯಾಗಿ ಮಗುವನ್ನು ಹೆತ್ತಿದ್ದ ನಟಿ ಕೃತಿ ಸನೋನ್, ಹೆರಿಗೆಯ ಬಳಿಕ 15 ಕೆಜಿ ತೂಕ ಕಳೆದುಕೊಂಡಿದ್ದಾರೆ!

ಹೌದು, ‘ಮಿಮಿ’ ಚಿತ್ರದಲ್ಲಿನ ಪಾತ್ರಕ್ಕಾಗಿ ತೂಕ ಏರಿಸಿಕೊಂಡು ಸುದ್ದಿಯಾಗಿದ್ದ ನಟಿ, ಈಗ ತೂಕ ಕಳೆದುಕೊಂಡು ಸದ್ದು ಮಾಡಿದ್ದಾರೆ.

ಬಾಡಿಗೆ ತಾಯ್ತನದ ಕಥೆಯನ್ನು ಒಳಗೊಂಡಿದ್ದ ಕೃತಿ ಸನೊನ್ ಅಭಿನಯದ ಚಿತ್ರ ‘ಮಿಮಿ’ ಇತ್ತೀಚೆಗೆ ಬಿಡುಗಡೆಯಾಗಿತ್ತು. ಚಿತ್ರಕ್ಕಾಗಿ ಕೃತಿ 15 ಕೆಜಿ ತೂಕ ಏರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದರು.

ADVERTISEMENT

15 ಕೆಜಿ ತೂಕ ಏರಿಸುವುದು ನಟಿ ಕೃತಿಗೆ ದೊಡ್ಡ ಸವಾಲಾಗಿರಲಿಲ್ಲ.. ಆದರೆ ಈಗ 15 ಕೆಜಿ ತೂಕ ಇಳಿಸಿ, ಮತ್ತೆ ಮೊದಲಿನಂತಾಗುವುದು ಕೃತಿಗೆ ಸವಾಲಾಗಿದೆ. ಅದಕ್ಕಾಗಿ ಅವರು ಫಿಟ್ನೆಸ್-ವರ್ಕೌಟ್ ಮೊರೆ ಹೋಗಿದ್ದಾರೆ.

ಮೂರು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಟಿ ಕೃತಿ ಯಾವುದೇ ಯೋಗ, ವರ್ಕೌ‌ಟ್ ಕೂಡ ಮಾಡಿಲ್ಲ. ಪ್ರಸ್ತುತ ಯಾಸ್ಮಿನ್ ಕರಾಚಿವಾಲ ಮತ್ತು ರಾಬಿನ್ ಭೇಲ್ ಅವರ ಬಳಿ ಫಿಟ್ನೆಸ್ ಟ್ರೈನಿಂಗ್ ಪಡೆದು, 15 ಕೆಜಿ ತೂಕ ಕಳೆದುಕೊಳ್ಳುವಲ್ಲಿ ನಟಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.