ADVERTISEMENT

ಪತಿಯೊಂದಿಗೆ ಕವಿ ಶೈಲಕ್ಕೆ ಭೇಟಿ ನೀಡಿದ ನಟಿ ಪೂಜಾಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2023, 12:59 IST
Last Updated 6 ಡಿಸೆಂಬರ್ 2023, 12:59 IST
<div class="paragraphs"><p>ಇನ್‌ಸ್ಟಾಗ್ರಾಮ್‌</p></div>
   

ಇನ್‌ಸ್ಟಾಗ್ರಾಮ್‌

ಬೆಂಗಳೂರು: ‘ಮುಂಗಾರು ಮಳೆ‘ ಸಿನಿಮಾದ ಮೂಲಕ ಚಂದವನದ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾಗಾಂಧಿ ತಮ್ಮ ಪತಿ ವಿಜಯ್‌ ಘೋರ್ಪಡೆ ಅವರ ಜೊತೆ ಇತ್ತೀಚಿಗೆ ಕವಿ ಶೈಲಕ್ಕೆ ಭೇಟಿ ನೀಡಿದ್ದರು.

ಕುವೆಂಪು ಅವರ ಮನೆಗೆ( ಕವಿ ಶೈಲ) ಭೇಟಿ ಸಂಬಂಧ ನಟಿ ಪೂಜಾಗಾಂಧಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ನ.29ರಂದು ‘ಮಂತ್ರ ಮಾಂಗಲ್ಯ‘ ಪರಿಕಲ್ಪನೆಯ ಮೂಲಕ ಉದ್ಯಮಿ ವಿಜಯ್‌ ಘೋರ್ಪಡೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡಿದ್ದ ಪೂಜಾ ಗಾಂಧಿ ಅವರು ಕನ್ನಡ ಕಲಿಕೆಯತ್ತ ಆಸಕ್ತಿ ತೋರಿದ್ದರು. ಕಳೆದ ಎರಡು ವರ್ಷಗಳಿಂದ ಕನ್ನಡದ ಅಕ್ಷರಗಳು, ವರ್ಣಮಾಲೆಯನ್ನು ಮಕ್ಕಳಂತೆ ಅವರು ಅಭ್ಯಾಸ ಮಾಡಿದ್ದಾರೆ. ಹಂತಹಂತವಾಗಿ ವಾಕ್ಯ ರಚನೆಯನ್ನೂ ಅವರು ಕಲಿತಿದ್ದಾರೆ. ಕನ್ನಡದ ಮೇಲಿನ ಅವರ ಪ್ರೀತಿಗೆ ಅವರೇ ಕನ್ನಡದಲ್ಲಿ ಬರೆದ ಮದುವೆ ಆಮಂತ್ರಣವೇ ಸಾಕ್ಷ್ಯವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.