
ನಟಿ ರಕುಲ್ ಪ್ರೀತ್ ಸಿಂಗ್
ಇತ್ತೀಚೆಗೆ ನಟ ಹಾಗೂ ನಟಿಯರ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಕನ್ನಡದ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅವರದ್ದೇ ನಂಬರ್ ಎಂದು ಹೇಳಿಕೊಂಡು ಒಂದಿಷ್ಟು ಜನರಿಗೆ ಮೆಸೇಜ್ ಮಾಡಿದ್ದ. ಆ ಬೆನ್ನಲ್ಲೆ ಜಗ್ಗೇಶ್ ಪುತ್ರನ ಗಿಲ್ಲಿ ಸಿನಿಮಾ ಚಂದನವನಕ್ಕೆ ಆಗಮಿಸಿದ್ದ ನಟಿ ರುಕುಲ್ ಪ್ರೀತಿ ಸಿಂಗ್ ಹೆಸರನ್ನು ಬಳಸಿಕೊಂಡು ಕಿಡಿಗೇಡಿಯೊಬ್ಬ ಜನರಿಗೆ ಮೋಸ ಮಾಡಲು ಯತ್ನಿಸಿದ್ದಾನೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರು ಅಭಿಮಾನಿಗಳಿಗೆ ಎಚ್ಚರಿಗೆ ನೀಡಿದ್ದಾರೆ. ಈ ಕುರಿತು ನಟಿ ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೀನ್ ಶಾಟ್ ಸಮೇತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಪೋಸ್ಟ್‌ನಲ್ಲಿ ಏನಿದೆ?
‘ನಮಸ್ಕಾರ ಗೆಳೆಯರೇ.. ಯಾರೋ ಒಬ್ಬ ನನ್ನ ಹೆಸರು ಹಾಕಿಕೊಂಡು ವಾಟ್ಸಾಪ್‌ನಲ್ಲಿ ಜನರಿಗೆ ಸಂದೇಶ ಕಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ದಯವಿಟ್ಟು ಇದು ನನ್ನ ಮೊಬೈಲ್ ನಂಬರ್ ಅಲ್ಲ. ಈ ನಂಬರ್‌ನಿಂದ ನಿಮಗೆ ಕರೆ ಅಥವಾ ಸಂದೇಶ ಬಂದರೆ ಪ್ರತಿಕ್ರಿಯೆ ನೀಡಬೇಡಿ. ದಯವಿಟ್ಟು ಆ ನಂಬರ್ ಅನ್ನು ಬ್ಲಾಕ್ ಮಾಡಿ’ ಎಂದು ರಕುಲ್ ಪ್ರೀತ್ ಸಿಂಗ್ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.
ಇನ್ನು, 8111067586 ಮೊಬೈಲ್ ನಂಬರಿನ ವಾಟ್ಸಪ್ ಡಿಪಿಯಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಫೋಟೊವನ್ನು ಹಾಕಲಾಗಿದೆ. ಬಯೋದಲ್ಲಿ ನಟಿಯ ಸಿನಿಮಾ ಹೆಸರನ್ನು ಬರೆಯಲಾಗಿದೆ. ನಟಿಯ ಹೆಸರನ್ನು ಬಳಸಿಕೊಂಡು ಜನರಿಗೆ ವಂಚಿಸಲು ಕಿಡಿಗೇಡಿಯೊಬ್ಬ ಪ್ರಯತ್ನಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.