
ರಶ್ಮಿಕಾ ಮಂದಣ್ಣ
ಚಿತ್ರ ಕೃಪೆ: @iamRashmika
ಬೆಂಗಳೂರು: ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ನಡುವೆಯೇ ರಿಲೇಶನ್‌ಶಿಪ್‌ನಲ್ಲಿ ಇರುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.
ಆದರೆ ಯಾರೊಂದಿಗೆ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ಬಗ್ಗೆ ಬಹಿರಂಗಗೊಳಿಸಿಲ್ಲ.
ಹಾಲಿವುಡ್ ವರದಿಗಾರರೊಬ್ಬರ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ, ತನ್ನ ಖುಷಿಯ ಜಾಗ ಯಾವುದು ಎಂದು ಹೇಳುವ ವೇಳೆ ತನ್ನ ಸಂಗಾತಿಯ ಬಗ್ಗೆ ಹೇಳಿದ್ದಾರೆ.
ರಶ್ಮಿಕಾ ಹೇಳಿದ್ದೇನು?
‘ಮನೆ ನನ್ನ ಸಂತೋಷದ ಸ್ಥಳ. ಯಶಸ್ಸು ಬಂದು ಹೋಗಬಹುದು, ಆದರೆ ಅದು ಶಾಶ್ವತವಲ್ಲ. ಹೊರಗಿನಿಂದ ಸಿಗುವ ಪ್ರೀತಿ ಮತ್ತು ಹೆಸರು ಕಣ್ಣಿಗೆ ಕಾಣಿಸಲಷ್ಟೆ. ಆದರೆ ಮನೆ ಸ್ಥಿರವಾಗಿರುತ್ತದೆ. ನಾನು ನಟಿ ಮಾತ್ರವಲ್ಲದೆ ಮಗಳು, ಸಹೋದರಿ, ಒಬ್ಬ ಸಂಗಾತಿ’ ಎಂದು ಹೇಳಿದ್ದಾರೆ.
ಇದೇ ವೇಳೆ ‘ಸದಾ ನಗುತ್ತಿರುವ ವ್ಯಕ್ತಿ ಮತ್ತು ಯಾರು ಅವರ ಸುತ್ತಲಿರುವ ಜನರನ್ನು ಗೌರವಿಸುತ್ತಾರೋ ಅಂತವರು ಇಷ್ಟವಾಗುತ್ತಾರೆ’ ಎಂದಿದ್ದಾರೆ.
ಇಡೀ ಮಾತುಕತೆ ವೇಳೆ ವಿಜಯ್ ದೇವರಕೊಂಡ ಅವರ ಹೆಸರನ್ನು ಹೇಳಿಲ್ಲ. ಆದರೂ ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಸದ್ದು ಮಾಡುತ್ತಿದೆ.
ಸದ್ಯ ರಶ್ಮಿಕಾ ಛಾವಾ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನು ಆಧರಿಸಿರುವ ಛಾವಾದಲ್ಲಿ ವಿಕ್ಕಿ ಕೌಶಲ್ ಜತೆಗೆ ಕಾಣಿಸಿಕೊಂಡಿರುವ ರಶ್ಮಿಕಾ ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.