ADVERTISEMENT

ರುಕ್ಮಿಣಿ ವಸಂತ್ ಹೆಸರಿನಲ್ಲಿ ವ್ಯಕ್ತಿಯಿಂದ ವಂಚನೆ: ನಟಿ ಖಡಕ್ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 6:42 IST
Last Updated 8 ನವೆಂಬರ್ 2025, 6:42 IST
   

ಕಾಂತಾರ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಟಿ ರುಕ್ಮಿಣಿ ವಸಂತ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಂಚನೆ ಮಾಡಲು ಯತ್ನಿಸಿದ ಆರೋಪಿ ವಿರುದ್ಧ ಕಿಡಿಕಾರಿದ್ದಾರೆ.

ವಂಚನೆಗೆ ಯತ್ನಿಸಿದ ಆರೋಪಿ, ರುಕ್ಮಿಣಿಗೆ ಸೇರಿದ ಮೊಬೈಲ್ ನಂಬರ್ ಎಂದು ಹೇಳಿಕೊಂಡು ಒಂದಷ್ಟು ಜನರಿಗೆ ಮೆಸೇಜ್ ಮಾಡಿದ್ದಾನಂತೆ. ಈ ವಿಚಾರ ರುಕ್ಮಿಣಿ ವಂಸತ್ ಗಮನಕ್ಕೆ ಬಂದಿದ್ದು, ಆ ಕೂಡಲೇ ಅವರು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೋರಿಯಲ್ಲಿ ಈ ನಂಬರ್‌ನಿಂದ ಅಲರ್ಟ್ ಆಗಿರಿ. ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ನಟಿ ರುಕ್ಮಿಣಿ ವಸಂತ್

ADVERTISEMENT

ನಟಿ ಪೋಸ್ಟ್‌ನಲ್ಲಿ ಏನಿದೆ?

ಪ್ರಮುಖ ಎಚ್ಚರಿಕೆ ಮತ್ತು ಜಾಗೃತಿ ಸಂದೇಶ.

‘9445893273 ಸಂಖ್ಯೆಯನ್ನು ಬಳಸುವ ಒಬ್ಬ ವ್ಯಕ್ತಿಯು ನನ್ನಂತೆ ನಟಿಸಿ ಸುಳ್ಳು ನೆಪದಲ್ಲಿ ಅನೇಕರಿಗೆ ಕರೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನಗೆ ಸೇರಿದ್ದಲ್ಲ. ಹಾಗಾಗಿ ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣ ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಸಂಪರ್ಕ ಬೆಳೆಸಬೇಡಿ’.

‘ಈ ಸೋಗು ಹಾಕುವ ಕೃತ್ಯವು ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ ಮತ್ತು ಅಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.