
‘ಯಾರೇ ನೀನು ಚೆಲುವೆ’ ಸಿನಿಮಾ ಖ್ಯಾತಿಯ ನಟಿ ಸಂಗೀತ ಮಾಧವನ್ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
‘ಸಂಗೀತ ಅವರು ಭಾಗ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿ ತಾಯಿಯ ಪಾತ್ರ. ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಚಿತ್ರದ ನಾಯಕಿ. ಉಳಿದ ಮಾಹಿತಿಯನ್ನು ಹಂತಹಂತವಾಗಿ ನೀಡಲಾಗುವುದು. ನಾಯಕ ಯಾರು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದೇವೆ. ಅದ್ದೂರಿ ಸಮಾರಂಭದಲ್ಲಿ ನಾಯಕನ ಹೆಸರು ಘೋಷಣೆಯಾಗಲಿದೆ’ ಎಂದಿದೆ ಚಿತ್ರತಂಡ.
‘ಹಲವು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಗೌರಿ ಆರ್ಟ್ಸ್ ಬ್ಯಾನರ್ ಸಮರ್ಥ ನಿರ್ಮಾಣ ಸಂಸ್ಥೆ ಎನಿಸಿತು. ಕಥೆ ಹಾಗೂ ನಿರ್ಮಾಣ ಸಂಸ್ಥೆ ಎರಡೂ ನನಗೆ ಇಷ್ಟವಾಯ್ತು. ಯಾವಾಗಲೂ ಸಕಾರಾತ್ಮಕವಾಗಿರುವ ತಾಯಿಯ ಪಾತ್ರ ನನ್ನದು’ ಎಂದಿದ್ದಾರೆ ಸಂಗೀತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.