ADVERTISEMENT

ಸೆಲೆಬ್ರಿಟಿಯನ್ನು ನೋಡಿ ತೂಕ ಕಳೆದುಕೊಳ್ಳಬೇಡಿ: ನಟಿ ಸಯ್ಯೇಷಾ ಕಿವಿಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2021, 6:28 IST
Last Updated 24 ಡಿಸೆಂಬರ್ 2021, 6:28 IST
ನಟಿ ಸಯ್ಯೇಷಾ
ನಟಿ ಸಯ್ಯೇಷಾ   

ಬೆಂಗಳೂರು: ತೂಕ ಕಳೆದುಕೊಳ್ಳಬೇಕು ಮತ್ತು ಸೆಲೆಬ್ರಿಟಿಗಳಂತೆ ದೇಹಾಕಾರ ಹೊಂದಿರಬೇಕು ಎಂದು ಬಯಸುವವರಿಗೆ ನಟಿ ಸಯ್ಯೇಷಾ ಕಿವಿಮಾತು ಹೇಳಿದ್ದಾರೆ.

ಸೆಲೆಬ್ರಿಟಿಗಳನ್ನು ನೋಡಿ ನೀವು ತೂಕ ಕಳೆದುಕೊಳ್ಳುವ ನಿರ್ಧಾರ ಮಾಡಬೇಡಿ, ತೆಳ್ಳಗಿರುವುದು ಒಳ್ಳೆಯದೇ, ಆದರೆ ಅದಕ್ಕಾಗಿ ನೀವು ನಟ–ನಟಿಯರನ್ನು ಅನುಸರಿಸಬಾರದು, ಪ್ರತಿಯೊಬ್ಬರ ದೇಹದ ರಚನೆ ಮತ್ತು ಆಕಾರ, ತೂಕ ಭಿನ್ನವಾಗಿರುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಸಯ್ಯೇಷಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ತಮಿಳು ನಟ ಆರ್ಯ ಅವರನ್ನು ವಿವಾಹವಾಗಿರುವ ಸಯ್ಯೇಷಾ, ಕಳೆದ ಜುಲೈ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ADVERTISEMENT

ಜಿಮ್ ವರ್ಕೌಟ್ ಮಾಡುತ್ತಿರುವ ಫೋಟೊ ಒಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆರಿಗೆಯ ಬಳಿಕ ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಹೆಚ್ಚುವರಿ ತೂಕವನ್ನುಕಡಿಮೆ ಮಾಡಬೇಕಾಗುತ್ತದೆ. ಅದಕ್ಕಾಗಿ ಯಾವುದೋ ದಾರಿಯನ್ನು ಅನುಸರಿಸಬಾರದು. ಪ್ರತಿ ಮಹಿಳೆಯೂ ತಮ್ಮದೇ ರೀತಿಯಲ್ಲಿ ಸುಂದರವಾಗಿರುತ್ತಾರೆ. ತೆಳುವಾಗಿರುವುದು ಒಳ್ಳೆಯದೇ, ಯಾಕೆಂದರೆ ದೇಹದಲ್ಲಿನ ಹೆಚ್ಚುವರಿಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಮತ್ತು ಕೊನೆಯದಾಗಿ ಆರೋಗ್ಯವಂತರಾಗಿರುವುದೇ ನಮ್ಮ ಗುರಿಯಾಗಿರಬೇಕು. ಅದಕ್ಕೆ ಸಮಯ ತಗುಲುತ್ತದೆ. ಹಾಗೆಂದು ಯಾವುದೋ ಸೆಲೆಬ್ರಿಟಿಯನ್ನು ನೋಡಿ, ಅವರಂತೆ ಆಗಬೇಕೆಂಬಗುರಿ ಇಟ್ಟುಕೊಳ್ಳಬೇಡಿ, ಯಾಕೆಂದರೆ ಪ್ರತಿಯೊಬ್ಬರೂ ಭಿನ್ನವಾದ ದೇಹ ರಚನೆ ಮತ್ತು ಆರೋಗ್ಯ ಸ್ಥಿತಿಯನ್ನು ಹೊಂದಿರುತ್ತಾರೆ. ಈ ಫೋಟೊ ಹಾಕಿರುವ ಉದ್ದೇಶವೇನೆಂದರೆ, ಫಿಟ್ ಆಗಿರುವುದು ನನ್ನ ಜೀವನಶೈಲಿ ಮತ್ತುಇದು ನನ್ನನ್ನು ಸಂತೋಷವಾಗಿರಿಸುತ್ತದೆ ಎಂದು ಸಯ್ಯೇಷಾ ಹೇಳಿದ್ದಾರೆ.

ಸಯ್ಯೇಷಾ ಅವರ ಹೇಳಿಕೆಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಮೆಚ್ಚುಗೆ ಕೂಡ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.