ADVERTISEMENT

ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2021, 5:43 IST
Last Updated 1 ಸೆಪ್ಟೆಂಬರ್ 2021, 5:43 IST
ನಟಿ ಸನ್ನಿ ಲಿಯೋನ್ - ಇನ್‌ಸ್ಟಾಗ್ರಾಂ ಪೋಸ್ಟ್
ನಟಿ ಸನ್ನಿ ಲಿಯೋನ್ - ಇನ್‌ಸ್ಟಾಗ್ರಾಂ ಪೋಸ್ಟ್   

ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ..

ರಜಾದಿನ ಕಳೆಯಲೆಂದು ಪ್ರವಾಸಕ್ಕೆ ತೆರಳಿರುವ ಸನ್ನಿ, ಮಾಲ್ಡೀವ್ಸ್ ಕಡಲ ತೀರದಲ್ಲಿ ಇರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಲ್ಡೀವ್ಸ್‌ನ ಒಹುವೆಲಿಯ ಸನ್ ಸಿಯಮ್ ರೆಸಾರ್ಟ್‌ನಲ್ಲಿ ಸನ್ನಿ ಲಿಯೋನ್ ತಂಗಿದ್ದು, ನೀಲಿ ಬಣ್ಣದ ಬಿಕಿನಿ ಧರಿಸಿ, ನೀಲಾಕಾಶದ ಹಿನ್ನೆಲೆಯಲ್ಲಿ ಇರುವ ಫೋಟೊಗಳನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಸನ್ನಿ ಲಿಯೋನ್ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಪತಿ ಡೇನಿಯಲ್ ವೆಬರ್, ಮಕ್ಕಳಾದ ನಿಶಾ, ಏಶರ್ ಮತ್ತು ನೋಹ್ ಜತೆ ಸನ್ನಿ ಲಿಯೋನ್ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.