ADVERTISEMENT

ಬೆಂಗಳೂರಿನಲ್ಲಿ ಕೆಎಸ್‌ಡಿಎಲ್‌ ರಾಯಭಾರಿ ನಟಿ ತಮನ್ನಾ ಭಾಟಿಯಾ ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 10:32 IST
Last Updated 11 ಫೆಬ್ರುವರಿ 2026, 10:32 IST
<div class="paragraphs"><p> ನಟಿ ತಮನ್ನಾ ಭಾಟಿಯಾ</p></div>

ನಟಿ ತಮನ್ನಾ ಭಾಟಿಯಾ

   

ಪಿಟಿಐ ಚಿತ್ರ

ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ರಾಯಭಾರಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ADVERTISEMENT

ಮಂಗಳವಾರ (ಫೆ.10)ರಂದು ನಗರದ ತಾಜ್‌ ವೆಸ್ಟ್ಎಂಡ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಅವರು ಭಾಗಿಯಾಗಿ, ನಿಗಮದ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ಮೂಲಕ ಕೆಎಸ್‌ಡಿಎಲ್‌ನ ರಾಯಭಾರಿಯಾಗಿ ಎರಡು ವರ್ಷ ನಟಿ ಎಲ್ಲ ಉತ್ಪನ್ನಗಳ ಪ್ರಚಾರ ನಡೆಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ನಿಗಮದ ಅಧ್ಯಕ್ಷ ಸಿ.ಎಸ್‌.ಅಪ್ಪಾಜಿ ನಾಡಗೌಡ, ನಟಿ ತಮನ್ನಾ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಟಿ, ‘ಮೈಸೂರು ಸ್ಯಾಂಡಲ್‌ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು ಬಾಲ್ಯ ಮತ್ತು ಸುಮಧುರ ನೆನಪುಗಳೆಲ್ಲ ಹೆಣೆದುಕೊಂಡಿವೆ ಎಂದರು.

‘ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪು ಇಲ್ಲ. ಇದಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ’ ಎಂದು ತಮನ್ನಾ ಭಾಟಿಯಾ ಹೇಳಿದರು.

ಕೆಂಪು ಬಣ್ಣದ ಸೀರೆ ಧರಿಸಿದ್ದ ನಟಿ ತಮನ್ನಾ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯ ಲುಕ್‌ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.