
ನಟಿ ರಚಿತಾ ರಾಮ್
ಚಿತ್ರ: ಇನ್‌ಸ್ಟಾಗ್ರಾಮ್
ಚಂದನವನದ ನಟಿ ರಚಿತಾ ರಾಮ್ ಮುಖಕ್ಕೆ ಮಾಸ್ಕ್ ಧರಿಸಿ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅದರ ಜೊತೆಗೆ ‘ಕ್ರಿಮಿನಲ್ ಸಿನಿಮಾ ಕಾರ್ಯಕ್ರಮ ಮುಗಿಸಿಕೊಂಡು ಕಡಲೆಕಾಯಿ ಪರಿಷೆಗೆ ಹೋಗಿದ್ದು ಹೀಗೆ. ಎಷ್ಟು ಮಜಾ ಮಾಡಿದ್ದೀನಿ ಗೊತ್ತಾ? ನನ್ನ ಜೊತೆಗಿದ್ದ ಹುಡುಗರಿಗೆ ಧನ್ಯವಾದಗಳು. ಈ ತಂಡದೊಂದಿಗೆ ನಾನು ಸೇರಲು ಅದೃಷ್ಟ ಮಾಡಿದ್ದೆ. 18 ವರ್ಷಗಳ ನಂತರ ನಾನು ಮತ್ತೆ ಕಡಲೆಕಾಯಿ ಪರಿಷೆಗೆ ನನ್ನ ಹುಡುಗರ ಜೊತೆಗೆ ಬಂದಿದ್ದೇನೆ. ಎಂತಹ ಅನುಭವ, ಅದ್ಭುತ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ವಿಶೇಷ ಏನೆಂದರೆ ಭರ್ಜರಿ ಸಿನಿಮಾ ಬಳಿಕ ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ಮತ್ತೆ ಒಂದಾಗಿದ್ದಾರೆ. ಎಂಟು ವರ್ಷಗಳ ಹಿಂದೆ ‘ಭರ್ಜರಿ’ ಸಿನಿಮಾದಲ್ಲಿ ನಟಿಸಿದ್ದ ಧ್ರುವ ಸರ್ಜಾ ಹಾಗೂ ರಚಿತಾ ಈಗ ‘ಕ್ರಿಮಿನಲ್’ ಸಿನಿಮಾದ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ನಿನ್ನೆಯಷ್ಟೇ (ಮಂಗಳವಾರ) ಚಿತ್ರತಂಡ ಕ್ರಿಮಿನಲ್ ಸಿನಿಮಾ ಮುಹೂರ್ತ ಹಾಗೂ ಟೈಟಲ್ ಲಾಂಚ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಭರ್ಜರಿ ಸಿನಿಮಾದ ಮುಹೂರ್ತ ನಡೆದ ಸ್ಥಳದಲ್ಲಿ ಕ್ರಿಮಿನಲ್ ಸಿನಿಮಾಗೆ ಮುಹೂರ್ತ ನೆರವೇರಿದೆ. ಡಿಸೆಂಬರ್‌ನಿಂದ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದ್ದು, ಈ ಸಿನಿಮಾದಲ್ಲಿ ಹಿರಿಯ ನಟಿ ತಾರಾ ಧ್ರುವ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಕೆರೆಬೇಟೆ ಖ್ಯಾತಿಯ ರಾಜ್ ಗುರು ನಿರ್ದೇಶನ ಮಾಡುತ್ತಿದ್ದು, ಗೋಲ್ಡ್ ಮೈನ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.