ADVERTISEMENT

‘ಉರಿ‘ ಚಿತ್ರದ ನಿರ್ದೇಶಕನನ್ನು ವರಿಸಿದ ಬಾಲಿವುಡ್ ನಟಿ ಯಾಮಿ ಗೌತಮ್

ಆದಿತ್ಯ ಧಾರ್ ಅವರೊಂದಿಗೆ ವಿವಾಹ

ಪಿಟಿಐ
Published 4 ಜೂನ್ 2021, 16:14 IST
Last Updated 4 ಜೂನ್ 2021, 16:14 IST
ಯಾಮಿ ಗೌತಮ್ ಆದಿತ್ಯ ಧಾರ್ ಅವರ ವಿವಾಹ ಸಂದರ್ಭ: ಫೋಟೊ– ಯಾಮಿಗೌತಮ್ ಇನ್ಸ್ಟಾಗ್ರಾಮ್ ಖಾತೆ
ಯಾಮಿ ಗೌತಮ್ ಆದಿತ್ಯ ಧಾರ್ ಅವರ ವಿವಾಹ ಸಂದರ್ಭ: ಫೋಟೊ– ಯಾಮಿಗೌತಮ್ ಇನ್ಸ್ಟಾಗ್ರಾಮ್ ಖಾತೆ   

ನವದೆಹಲಿ: ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿ, ಬಾಲಿವುಡ್’ನಲ್ಲಿ ಮಿಂಚುತ್ತಿರುವ ನಟಿ ಯಾಮಿ ಗೌತಮ್ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಅವರೊಂದಿಗೆ ವಿವಾಹವಾಗಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಯಾಮಿ ಮದುವೆಯ ಫೋಟೊ ಹಂಚಿಕೊಂಡಿದ್ದಾರೆ.ಯಾಮಿ ಗೌತಮ್ – ಆದಿತ್ಯಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

'ನಿನ್ನ ಬೆಳಕಲ್ಲಿ ನಾನು ಪ್ರೀತಿಸುವುದ ಕಲಿತೆ’ ಎಂದು ಯಾಮಿಬರೆದುಕೊಂಡಿದ್ದಾರೆ. ಕೊರೊನಾ ಕಾರಣದಿಂದ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ADVERTISEMENT

ಯಾಮಿ ಗೌತಮ್ ಅವರು ಹಿಮಾಚಲ ಪ್ರದೇಶ ಮೂಲದವರಾಗಿದ್ದು, ಆದಿತ್ಯ ಧಾರ್ ಅವರು ದೆಹಲಿ ಮೂಲದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.