ನಟ ಅಜಯ್ ದೇವಗನ್
ಮುಂಬೈ: ಇಂದ್ರ ಕುಮಾರ್ ನಿರ್ದೇಶನದ, ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ಧಮಾಲ್–4' ಚಿತ್ರ 2026ರ ಈದ್‌ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಶನಿವಾರ ತಿಳಿಸಿದ್ದಾರೆ.
ಈ ಸಂಬಂಧ ನಟ ಅಜಯ್ ದೇವಗನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
'ಶೀಘ್ರದಲ್ಲೇ ನಿಮ್ಮ ಹೃದಯ ಲೂಟಿ ಮಾಡಲು ಬರುತ್ತಿದ್ದೇವೆ. ನಮ್ಮ ಗ್ಯಾಂಗ್ ನಿಮಗೆ ಭರಪೂರ ಮನರಂಜನೆ ಹೊತ್ತು ಬರುತ್ತಿದ್ದು, ಸಿದ್ಧರಾಗಿ' ಎಂದು ದೇವಗನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಹಾಸ್ಯ ಪ್ರಧಾನ ಚಿತ್ರದಲ್ಲಿ ದೇವಗನ್ ಜತೆ ರಿತೇಶ್ ದೇಶ್‌ಮುಖ್, ಅರ್ಷದ್ ವಾರ್ಸಿ ಮತ್ತು ಜಾವೇದ್ ಜಾಫರಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
2007ರಲ್ಲಿ ಧಮಾಲ್–1 ಚಿತ್ರ ಬಿಡುಗಡೆಯಾಗಿತ್ತು ಡಬಲ್ ಧಮಾಲ್ (2009) ಮತ್ತು ಟೋಟಲ್ ಧಮಾಲ್ (2019) ಚಿತ್ರವು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಇದರ ಮುಂದುವರಿದ ಭಾಗ ಧಮಾಲ್–4.
ಧಮಾಲ್ 4 ಚಿತ್ರವನ್ನು ಟಿ-ಸೀರೀಸ್ ಬ್ಯಾನರ್‌ನಡಿ ದೇವಗನ್, ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅಶೋಕ್ ಠಾಕೇರಿಯಾ, ಇಂದ್ರ ಕುಮಾರ್, ಆನಂದ್ ಪಂಡಿತ್ ಮತ್ತು ಕುಮಾರ್ ಮಂಗತ್ ಪಾಠಕ್ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.