ADVERTISEMENT

ಬಾಲಿವುಡ್‌ ನಟ ಅಜಯ್ ದೇವಗನ್ ಭೇಟಿಯಾದ ‘ಸು ಫ್ರಮ್ ಸೋ’ ಚಿತ್ರ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2025, 2:32 IST
Last Updated 13 ಆಗಸ್ಟ್ 2025, 2:32 IST
<div class="paragraphs"><p>ಬಾಲಿವುಡ್‌ ನಟ ಅಜಯ್ ದೇವಗನ್ ಭೇಟಿಯಾದ ‘ಸು ಫ್ರಮ್ ಸೋ’ ಚಿತ್ರ ತಂಡ</p></div>

ಬಾಲಿವುಡ್‌ ನಟ ಅಜಯ್ ದೇವಗನ್ ಭೇಟಿಯಾದ ‘ಸು ಫ್ರಮ್ ಸೋ’ ಚಿತ್ರ ತಂಡ

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಂ

ಬೆಂಗಳೂರು: ಸದ್ಯ ಕನ್ನಡ ಚಿತ್ರರಂಗದಲ್ಲಿ ‘ಸು ಫ್ರಮ್ ಸೋ’ ಚಿತ್ರದ್ದೇ ಸುದ್ದಿ. ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿರುವ ಸಿನಿಮಾ, ಬಿಡುಗಡೆಯಾದ ಮೂರನೇ ವಾರದಲ್ಲೂ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ADVERTISEMENT

ಇತ್ತೀಚೆಗೆ ಚಿತ್ರ ತಂಡ ಮುಂಬೈನಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರನ್ನು ಭೇಟಿಯಾಗಿದೆ.

ಈ ಕುರಿತು ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘ಅಜಯ್‌ ದೇವಗನ್‌ ಅವರಿಗೆ ನಮ್ಮ ‘ಸು ಫ್ರಮ್ ಸೋ’ ಚಿತ್ರ ತುಂಬಾ ಇಷ್ಟವಾಗಿತ್ತು, ಹೀಗಾಗಿ ಅದರ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದರು. ಮಾತುಕತೆ ವೇಳೆ ಅವರ ಅದ್ಭುತ ವ್ಯಕ್ತಿತ್ವದ ಪರಿಚಯವಾಯಿತು. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ’ ಎಂದು ಬರೆದುಕೊಂಡಿದ್ದು, ಅವರ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಜೆ.ಪಿ.ತೂಮಿನಾಡು ನಿರ್ದೇಶನದ, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ, ರಾಜ್ ಬಿ.ಶೆಟ್ಟಿ ಸೇರಿ ಹಲವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಜುಲೈ 25ರಂದು ತೆರೆಕಂಡ ಈ ಚಿತ್ರ, ಇದೇ ವೇಳೆ ಬಿಡುಗಡೆಯಾದ ಹಿಂದಿಯ ‘ಸೈಯಾರಾ’, ಹಾಲಿವುಡ್‌ನ ‘ಎಫ್‌1’ ಹಾಗೂ ತೆಲುಗಿನ ‘ಹರಿ ಹರ ವೀರಮಲ್ಲು’ ನಡುವೆಯೂ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ.

ಅಜಯ್‌ ದೇವಗನ್‌ ಭೇಟಿಯ ಬೆನ್ನಲ್ಲೇ ‘ಸು ಫ್ರಮ್ ಸೋ’  ಹಿಂದಿಗೂ ರೀಮೇಕ್‌ ಆಗುತ್ತಾ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.