ADVERTISEMENT

ವಾರ್‌: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಹೃತಿಕ್‌, ಟೈಗರ್‌ ಶ್ರಾಫ್ 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 10:31 IST
Last Updated 3 ಅಕ್ಟೋಬರ್ 2019, 10:31 IST
ಚಿತ್ರಮಂದಿರವೊಂದರ ಬಳಿ ಟೈಗರ್‌ ಶ್ರಾಫ್‌ ( ಚಿತ್ರ ಕೃಪೆ: ಇನ್‌ಸ್ಟಾಂಟ್‌ ಬಾಲಿವುಡ್‌)
ಚಿತ್ರಮಂದಿರವೊಂದರ ಬಳಿ ಟೈಗರ್‌ ಶ್ರಾಫ್‌ ( ಚಿತ್ರ ಕೃಪೆ: ಇನ್‌ಸ್ಟಾಂಟ್‌ ಬಾಲಿವುಡ್‌)   

ಬೆಂಗಳೂರು:ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್ ನಟಿಸಿರುವ ಬಾಲಿವುಡ್‌ನ ‘ವಾರ್‌’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.

ವಿದೇಶ ಸೇರಿದಂತೆ ಭಾರತದ 5350 ಚಿತ್ರಮಂದಿರಗಳಲ್ಲಿ‘ವಾರ್‌’ ಸಿನಿಮಾ ಬುಧವಾರ ಬಿಡುಗಡೆಯಾಗಿದೆ.ಭಾರತದ 4000 ಹಾಗೂ ವಿದೇಶಗಳಲ್ಲಿನ 1350 ಚಿತ್ರಮಂದಿರುಗಳಲ್ಲಿ ತೆರೆಗೆ ಬಂದಿರುವ‘ವಾರ್‌’ ಸಿನಿಮಾದ ಮೊದಲ ದಿನದ ಗಳಿಕೆ ಬರೊಬ್ಬರಿ ₹ 53.35 ಕೋಟಿ.

ಹಾಲಿವುಡ್‌ನ ಅವೆಂಜರ್‌ ದಿ ಎಂಡ್‌ ಗೇಮ್‌ ಸಿನಿಮಾ₹ 50.10 ಕೋಟಿ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ನಂತರದ ಸ್ಥಾನಗಳಲ್ಲಿ ಥಂಗ್ಸ್‌ ಆಫ್‌ ಹಿಂದೂಸ್ತಾನ್‌ (₹52.25 ಕೋಟಿ), ಹ್ಯಾಪಿ ನ್ಯೂ ಇಯರ್‌(₹44.97 ಕೋಟಿ), ಭಾರತ್‌(₹42.30 ಕೋಟಿ) ಸಿನಿಮಾಗಳು ಇದ್ದವು. ಈ ಎಲ್ಲಾ ದಾಖಲೆಗಳನ್ನು ಮುರಿದು‘ವಾರ್‌’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ADVERTISEMENT

ಹೃತಿಕ್‌ , ಟೈಗರ್‌ ಶ್ರಾಫ್ ಅವರ ಇದುವರೆಗಿನ ದಾಖಲೆಗಳನನ್ನು ಈ ಸಿನಿಮಾ ಮುರಿದಿದೆ.‘ವಾರ್‌’ ಮೂಲಕಟೈಗರ್‌ ಶ್ರಾಫ್‌ ಹೊಸ ಇಮೇಜ್‌ ಪಡೆದುಕೊಂಡಿದ್ದಾರೆ. ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳಿಗಾಗಿ ಈ ಸಿನಿಮಾ ದಾರಿ ಮಾಡಿಕೊಟ್ಟಿದೆ. ಕಳೆದ ಕೆಲವು ವರ್ಷಗಳಿಂದ ವೈಯಕ್ತಿಕ ಜಂಜಡಗಳಲ್ಲಿ ಬಸವಳಿದಿದ್ದ ಹೃತಿಕ್‌ ಅವರಿಗೂ‘ವಾರ್‌’ ಕಿಕ್‌ ಕೊಟ್ಟಿದೆ.

ನಿರ್ಮಾಪಕಆದಿತ್ಯ ಚೋಪ್ರ ₹ 600 ಕೋಟಿ ವೆಚ್ಚದಲ್ಲಿ ವಾರ್‌ ಚಿತ್ರ ನಿರ್ಮಿಸಿದ್ದಾರೆ. ಸಿದ್ಧಾರ್ಥ್ ಆನಂದ್‌ ಆ್ಯಕ್ಷನ್‌ ಕಟ್‌ ಹೇಳಿರುವ‘ವಾರ್‌’ ನಲ್ಲಿ ವಾಣಿ ಕಪೂರ್‌ ಸಖತ್ ಬೋಲ್ಡ್‌ ಆಗಿ ನಟಿಸಿದ್ದಾರೆ.

ಈ ಸಲದ ದಸರಾಗೆಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ಗಿಫ್ಟ್‌ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.