ADVERTISEMENT

Allu Arjun: ಕ್ಷಮಿಸಿ… ಜೈಲಿನಿಂದ ಬಿಡುಗಡೆಗೊಂಡ ನಟ ಅಲ್ಲು ಅರ್ಜುನ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2024, 4:31 IST
Last Updated 14 ಡಿಸೆಂಬರ್ 2024, 4:31 IST
<div class="paragraphs"><p>ಅಲ್ಲು ಅರ್ಜುನ್</p></div>

ಅಲ್ಲು ಅರ್ಜುನ್

   

– ಪಿಟಿಐ ಚಿತ್ರ

ಹೈದರಾಬಾದ್‌: ಪುಷ್ಪ–2 ಚಿತ್ರದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣ ಸಂಬಂಧ ಬಂಧನಕೊಳಗಾಗಿದ್ದ ಟಾಲಿವುಡ್ ನಟ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಚಂಚಲಗುಡ ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡರು.

ADVERTISEMENT

ಜೈಲಿನಿಂದ ಬಿಡುಗಡೆಯಾಗಿ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

‘ನನಗೆ ಬೆಂಬಲ ನೀಡಿದ ಎಲ್ಲರಿಗೂ, ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಸಮರ್ಪಿಸುವೆ. ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಕ್ಷೇಮವಾಗಿದ್ದೇನೆ’ ಎಂದು ಅವರು ಹೇಳಿದರು.

‘ನಾನು ಕಾನೂನು ಪಾಲಿಸುವ ನಾಗರಿಕ. ಎಲ್ಲದಕ್ಕೂ ನಾನು ಸಹಕರಿಸುವೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ನಾನು ಮತ್ತೊಮ್ಮೆ ಸಂತಾಪ ವ್ಯಕ್ತಪಡಿಸುವೆ. ಅದೊಂದು ದುರದೃಷ್ಟಕರ ಘಟನೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇವೆ’ ಎಂದರು.

ಡಿ. 4ರಂದು ಚಿತ್ರದ ಪ್ರಿಮಿಯರ್ ಶೋ ಪ್ರದರ್ಶನ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಡಿ. 13ರಂದು ಪೊಲೀಸರು ಬಂಧಿಸಿದ್ದರು. ಸಂಜೆ ತೆಲಂಗಾಣ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಒಬ್ಬ ವ್ಯಕ್ತಿಯ ಖಾತರಿ ಹಾಗೂ ₹50 ಸಾವಿರ ಬಾಂಡ್‌ ಮೇಲೆ ಜಾಮೀನು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.