ADVERTISEMENT

ದಯವಿಟ್ಟು ಜಾಗಕೊಡಿ: ಅಭಿಮಾನಿಗಳಿಗೆ ಮನವಿ ಮಾಡಿದ ನಟ ಅಲ್ಲು ಅರ್ಜುನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 7:46 IST
Last Updated 5 ಜನವರಿ 2026, 7:46 IST
<div class="paragraphs"><p>ನಟ ಅಲ್ಲು ಅರ್ಜುನ್‌ ದಂಪತಿ</p></div>

ನಟ ಅಲ್ಲು ಅರ್ಜುನ್‌ ದಂಪತಿ

   

ಚಿತ್ರ: ಎಕ್ಸ್ ಖಾತೆ

ಇತ್ತೀಚೆಗೆ ಜನಪ್ರಿಯ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಿಗೆ ಬರಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ ನಟಿ ಸಮಂತಾ ಹಾಗೂ ನಿಧಿ ಅಗರ್ವಾಲ್ ಅವರಿಗೆ ಕೆಲವು ಜನರಿಂದ ಕಹಿ ಅನುಭವ ಆಗಿತ್ತು. ಈಗ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ದಂಪತಿ ಕೂಡ ಅದೇ ರೀತಿಯ ಘಟನೆಯನ್ನು ಎದುರಿಸಿದ್ದಾರೆ.

ADVERTISEMENT

ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್ ಮತ್ತು ಪತ್ನಿ ಸ್ನೇಹಾ ರೆಡ್ಡಿ ಅವರ ಜತೆ ಫೋಟೊಗಾಗಿ ಜನರು ಮುಗಿಬಿದ್ದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ನೂರಾರು ಜನರು ಫೋಟೊಗಾಗಿ ಮುಗಿಬೀಳುತ್ತಿದ್ದ ಸ್ಥಳದಿಂದ ಹೊರಬರಲು ಆಗದೇ ದಂಪತಿ ಪರದಾಡಿದ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.

ಅಲ್ಲು ಅರ್ಜುನ್‌ ದಂಪತಿ ಶನಿವಾರ ಸಂಜೆ ಹೈದರಾಬಾದ್‌ನಲ್ಲಿರುವ ಕೆಫೆ ನಿಲೋಫರ್‌ಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಅಲ್ಲು ಅರ್ಜುನ್‌ ದಂಪತಿಯನ್ನು ನೋಡ ನೋಡುತ್ತಿದ್ದಂತೆ ಜನರ ಹಿಂಡು ಸುತ್ತುವರೆದಿತ್ತು. ಆಗ ನಟ ಅಲ್ಲು ಅರ್ಜುನ್ ಸ್ವಲ್ಪ ಜಾಗ ಕೊಡಿ ಎಂದು ಬೇಡಿಕೊಂಡಿದ್ದಾರೆ. ಅಲ್ಲದೇ ಪತ್ನಿಯನ್ನು ತಮ್ಮ ಕಾರಿನ ಬಳಿಗೆ ಕರೆದೊಯ್ಯಲು ಒದ್ದಾಡಿದ್ದಾರೆ. ಭದ್ರತಾ ಸಿಬ್ಬಂದಿಯ ಕಾವಲು ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಈ ವಿಡಿಯೊ ನೋಡಿದ ಅಲ್ಲು ಅರ್ಜನ್‌ ಅಭಿಮಾನಿಗಳು ಗರಂ ಆಗಿದ್ದಾರೆ.