ಅಲ್ಲು ಅರ್ಜುನ್ ಸಹೋದರ ಸಿರೀಶ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ವಿಜಯ್ ದೇವರಕೊಂಡ ದಂಪತಿ
ಕೃಪೆ: ಇನ್ಸ್ಟಾಗ್ರಾಮ್
ಮಾರ್ಚ್ 6ರಂದು ಅಲ್ಲು ಅರ್ಜುನ್ ಅವರ ಸಹೋದರ ಸಿರೀಶ್ ಅವರು ನಯನಿಕಾ ರೆಡ್ಡಿ ಜೊತೆ ಹಸೆಮಣೆ ಏರಲಿದ್ದಾರೆ.
ಸಿರೀಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿದ್ದಾರೆ.
‘ವಿರೋಶ್’ ದಂಪತಿಗೆ ವಿವಾಹದ ಬಳಿಕ ಮೊದಲ ಕಾರ್ಯಕ್ರಮ ಇದಾಗಿದೆ.
ಫೆಬ್ರುವರಿ 26ರಂದು ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ವಿರೋಶ್’ ಜೋಡಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ತೆಲುಗು ನಟ ಅಲ್ಲು ಅರ್ಜುನ್
ಅಲ್ಲು ಸಿರೀಶ್ ಮೆಹಂದಿ ಶಾಸ್ತ್ರದಲ್ಲಿ ‘ವಿರೋಶ್’ ಜೋಡಿ ಭಾಗಿಯಾಗಿ ಶುಭ ಕೋರಿದ್ದಾರೆ.
ಅಲ್ಲು ಅರ್ಜುನ್ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.