ರಾಘವೇಂದ್ರ ರಾಜ್‌ಕುಮಾರ್ ಅವರು ಹದಿನಾಲ್ಕು ವರ್ಷಗಳ ನಂತರ ಮತ್ತೆ ನಟನೆಗೆ ತೊಡಗಿಕೊಂಡಿರುವುದು, ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿರುವುದು ಗೊತ್ತೇ ಇದೆ. ಅದರಲ್ಲಿ ನಿಖಿಲ್ ಮಂಜೂ ನಿರ್ದೇಶನದ ‘ಅಮ್ಮನ ಮನೆ’ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಅಮ್ಮನ ಮನೆ’ಗೆ ಬಿ. ಶಿವಾನಂದ ಸಂಭಾಷಣೆ ಬರೆಯುತ್ತಿದ್ದಾರೆ. ಪಿವಿಆರ್ ಸ್ವಾಮಿ ಛಾಯಾಗ್ರಹಣ ಮತ್ತು ಸಮೀರ್ ಕುಲಕರ್ಣಿ ಸಂಗೀತ ಇರಲಿದೆ.
ಆಗಸ್ಟ್ 15ರಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಆದರೆ ಮುಹೂರ್ತಕ್ಕೆ ನಾಲ್ಕು ದಿನಗಳ ಮೊದಲೇ ಈ ಚಿತ್ರದಲ್ಲಿ ರಾಘಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಿರ್ದೇಶಕರು. ಹೌದು, ಚಿತ್ರತಂಡ ಇದೀಗ ರಾಘಣ್ಣನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಸೀಟಿಯನ್ನು ಕೈಯಲ್ಲಿ ಹಿಡಿದು ನಿಂತಿರುವ ಅವರ ಲುಕ್‌ನಲ್ಲಿ ಹೊಸತನವಿದೆ. ಪಾತ್ರದ ಕುರಿತು ಇನ್ನಷ್ಟು ಕುತೂಹಲ ಹುಟ್ಟಿಸುವ ಹಾಗಿದೆ. ಫಸ್ಟ್ ಲುಕ್‌ನ ಕೆಲವು ಚಿತ್ರಗಳು ಇಲ್ಲಿವೆ ನೋಡಿ.
*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.