ADVERTISEMENT

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ಪ್ರಜಾವಾಣಿ ವೆಬ್‌ ಡೆಸ್ಕ್‌
Published 15 ಸೆಪ್ಟೆಂಬರ್ 2025, 10:37 IST
Last Updated 15 ಸೆಪ್ಟೆಂಬರ್ 2025, 10:37 IST

ಚಿತ್ರ ಕೃ‍ಪೆ: zeekannada ಮತ್ತು varungowda.official

ಚಿತ್ರ ಕೃ‍ಪೆ: zeekannada ಮತ್ತು varungowda.official

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದರು. ನನ್ನ ಹಾಗೂ ರೋಷನ್‌ ಮದುವೆಯಲ್ಲಿ ಸ್ವಂತ ಅಣ್ಣನಾಗಿ ವರುಣ್‌ ಗೌಡ ಅವರು ಓಡಾಡಿದ್ದಾರೆ ಎಂದು ಅನುಶ್ರೀ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ಚಿತ್ರ ಕೃಪೆ: zeekannada

ADVERTISEMENT

ಮದುವೆ ಬಳಿಕ ಅನುಶ್ರೀ ಮತ್ತೆ ನಿರೂಪಣೆಗೆ ಮರಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿಯಲ್ಲಿ ನಿರೂಪಕಿಯಾಗಿದ್ದಾರೆ. ಕಳೆದ ವಾರ ಜೀ ವಾಹಿನಿಯಲ್ಲಿ ಮಹಾನಟಿ ಹಾಗೂ ನಾವು ನಮ್ಮವರು ಶೋಗಳ ಮಹಾಸಂಗಮ ಇತ್ತು. ಮದುವೆ ಬಳಿಕ ಮತ್ತೆ ನಿರೂಪಣೆಗೆ ಮರಳಿದ್ದ ಅನುಶ್ರೀ ಅವರಿಗೆ ಎಲ್ಲರೂ ಶುಭಾಶಯಗಳನ್ನು ತಿಳಿಸಿದ್ದರು. ಆ ವೇಳೆ ಅನುಶ್ರೀ ತಮ್ಮ ಮದುವೆ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

ಈ ಬಗ್ಗೆ ವೇದಿಕೆ ಮೇಲೆ ಮಾತಾಡಿದ ಅನುಶ್ರೀ, ನನಗೆ ಬಹಳ ಸರಳವಾಗಿ ಮದುವೆ ಆಗೋ ಯೋಚನೆ ಆಗಿತ್ತು. ನನ್ನ ಮದುವೆಗೆ ಬಂದವರು ಯಾರೂ ಸೆಲೆಬ್ರಿಟಿಗಳಲ್ಲ, ಅವರೆಲ್ಲ ನನ್ನ ಆತ್ಮೀಯರು. ನಾನು ಎಲ್ಲರನ್ನು ಕರೆಯೋಕೆ ಆಗಲಿಲ್ಲ. ನಮ್ಮ ಮನೆಯವರಿಗಿಂತ ಹೆಚ್ಚಾಗಿ ಓಡಾಡಿಕೊಂಡು ಮದುವೆ ಮಾಡಿಸಿದ್ದು ರಾಜ್‌ ಬಿ ಶೆಟ್ಟಿ ಅವರು ಎಂದರು.

ಮತ್ತೆ ಮಾತನ್ನು ಮುಂದುವೆರೆಸಿದ ಅವರು, ನನ್ನ ಜೀವನದ ಅತ್ಯಂತ ಸುಂದರವಾದ ಕ್ಷಣವನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದು ನನ್ನ ಒಳ್ಳೆಯ ಸ್ನೇಹಿತ, ಅಣ್ಣ ವರುಣ್‌ ಗೌಡ. ನನ್ನ ಮದುವೆ ಅವನ ದೊಡ್ಡ ಕನಸಾಗಿತ್ತು. ನನ್ನ ತಂಗಿ ಮದುವೆ ಹೀಗೆ ಮಾಡಿಸಬೇಕು ಅಂತ ಹೇಳಿದ್ದ ಎಂದು ಭಾವುಕರಾಗಿದ್ದಾರೆ. ನಾನು ಎಷ್ಟು ಹೇಳಿದರು ವರುಣ್‌ ನನ್ನ ಮಾತು ಕೇಳಲಿಲ್ಲ. ನನ್ನ ತಂಗಿ ಮದುವೆ ಹೀಗೆ ಮಾಡ್ತೀನಿ ಅಂತ ಹೇಳಿದ. ವರುಣ್‌ ಗೌಡ ಅಪ್ಪು ಸರ್‌ ಅವರ ದೊಡ್ಡ ಅಭಿಮಾನಿ. ಅಪ್ಪು ಸರ್‌ ಅವರೇ ಇವನನ್ನು ಕರೆಸಿ ನನ್ನ ಮದುವೆ ಮಾಡಿಸಿದ್ದು ಅಂತ ನಾನು ನಂಬಿದ್ದೇನೆ. ಪುನೀತ್‌ ಸರ್‌ ಎಲ್ಲಿಯೂ ಹೋಗಿಲ್ಲ. ನನ್ನ ಮದುವೆಗೆ ಬಂದ ಶಿವರಾಜ್‌ ಕುಮಾರ್ ಹಾಗೂ ಗೀತಕ್ಕ ಬಂದಿದ್ದ ಎಲ್ಲರಲ್ಲೂ ಅಪ್ಪು ಸರ್ ಇದ್ದರು ಅಂತ ಹೇಳಿದ್ದಾರೆ.

ಇದಾದ ಬಳಿಕ ಮಾತಾಡಿದ ನಿರ್ಮಾಪಕ ವರುಣ್‌ ಗೌಡ, ಇವರುಗಳು ಹೇಳುವ ರೀತಿ ನಾನೇನು ಮಾಡಿಲ್ಲ. ನನಗೆ ಅಪ್ಪು ಸರ್‌ ಅವರು ನಿಮ್ಮ ಬಳಿ ಆದರೆ ಒಳ್ಳೆಯದು ಮಾಡಿ, ಕೆಟ್ಟದ್ದು ಮಾಡಬೇಡಿ ಎಂದಿದ್ದರು. ನನ್ನ ಮದುವೆಯಲ್ಲಿ ಪುನೀತ್‌ ಸರ್‌ ಮಿಸ್‌ ಮಾಡಿಕೊಂಡೆ, ನನ್ನ ತಂಗಿ ಅನು ಮದುವೆಯಲ್ಲಿಯೂ ಮಿಸ್‌ ಮಾಡಿಕೊಂಡಿದ್ದೀನಿ. ಒಳ್ಳೆಯದಾಗಲಿ ಅನು ನಿನಗೆ ಎಂದು ಕಣ್ಣೀರು ಹಾಕಿದ್ದಾರೆ.

ಚಿತ್ರ ಕೃಪೆ: varungowda.official

ವರುಣ್ ಗೌಡ ಅವರು ನಿರ್ಮಾಪಕ ಆಗಿದ್ದಾರೆ. ಅಲ್ಲದೇ ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಕಾವ್ಯಾ ಶಾ ಅವರ ಪತಿ. ವರುಣ್‌ ಗೌಡ ಅವರು ಸಾಕಷ್ಟು ಕನ್ನಡದ ನಟ ಹಾಗೂ ನಟಿಯರ ಉತ್ತಮ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲದೇ ಜೀ ಕನ್ನಡದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ವರುಣ್‌ ಗೌಡ ಅವರು ಪಬ್‌ ಮಾಲೀಕರು ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.