ಅಂದಾಜ್ ಅಪ್ನಾ ಅಪ್ನಾ ಸಿನಿಮಾ ರೀ –ರಿಲೀಸ್
ಚಿತ್ರ ಕೃಪೆ: ಎಕ್ಸ್
ನವದೆಹಲಿ: ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಜತೆಯಾಗಿ ನಟಿಸಿದ್ದ ಬಾಲಿವುಡ್‌ನ ಹಾಸ್ಯ ಸಿನಿಮಾ ‘ಅಂದಾಜ್ ಅಪ್ನಾ ಅಪ್ನಾ’ ರೀ –ರಿಲೀಸ್ ಆಗಿದ್ದು ಮೂರೇ ದಿನದಲ್ಲಿ ₹1.2 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ಕರಿಷ್ಮಾ ಕಪೂರ್, ರವೀನಾ ಟಂಡನ್, ಪರೇಶ್ ರಾವಲ್, ಶಕ್ತಿ ಕಪೂರ್ ಕೂಡ ಕಾಣಿಸಿಕೊಂಡಿದ್ದರು. ಈ ಚಿತ್ರ 1994ರಲ್ಲಿ ತೆರೆಕಂಡಿತ್ತು. ಈಗ ಏ.25ರಂದು ಮರು ಬಿಡುಗಡೆಯಾಗಿದೆ.
30 ವರ್ಷಗಳ ಬಳಿಕವೂ ಸಿನಿಮಾಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಿನಿಮಾದ ಮರು ಬಿಡುಗಡೆಯನ್ನು ಜನರು ಸಂಭ್ರಮಿಸುತ್ತಿದ್ದಾರೆ. ಮೊದಲ ದಿನ ₹25 ಲಕ್ಷ ಗಳಿಸಿತ್ತು, ಪ್ರೇಕ್ಷಕರ ಸಂಖ್ಯೆ ಹೆಚ್ಚಿದ ಕಾರಣ ಸಿನಿಮಾ ಪ್ರದರ್ಶನವನ್ನೂ ಹೆಚ್ಚಿಸಲಾಗಿದೆ ಎಂದು ಸಿನಿಪೊಲಿಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೇವಾಂಗ್ ಸಂಪತ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಸಿನಿಮಾ ಮೊದಲ ಬಾರಿ ತೆರೆಕಂಡಾಗ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ, ಆದರೆ ಟಿವಿಗಳಲ್ಲಿ ಪ್ರಸಾರವಾದ ಬಳಿಕ ಹೆಚ್ಚಿನ ಜನರನ್ನು ಸೆಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.