
ಬೆಂಗಳೂರು: ನಟ ಅನಿರುದ್ದ್ ಆಗಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸಮಸ್ಯೆಗಳ ವಿರುದ್ಧ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಬನಶಂಕರಿ ರಸ್ತೆ ಒಂದರಲ್ಲಿ ಕಸದ ರಾಶಿಯನ್ನು ತೆಗೆಯುವಂತೆ ಮನವಿ ಮಾಡಿಕೊಂಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
‘ರಸ್ತೆಗಳು ಗುಂಡಿಗಳಿಂದ, ಕೊಳಕಿನಿಂದ ತುಂಬಿದೆ. ತಾತ್ಕಲಿಕವಾಗಿ ರಸ್ತೆ ಬದಿಯಲ್ಲಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಮ್ಮ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ‘ ಎಂದು ಹೇಳಿದ್ದಾರೆ.
ಇವರ ಪರಿಸರ ಕಾಳಜಿಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಚಿಟ್ಟೆ ‘, ‘ಜೇಷ್ಠ‘ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾದಿಂದ ದೂರ ಉಳಿದಿದ್ದ ನಟ ಅನಿರುದ್ದ್, ಕನ್ನಡದ ಜೊತೆ ಜೊತೆಯಲ್ಲಿ ಎಂಬ ಧಾರವಾಹಿಯಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.