ADVERTISEMENT

ನಿವೃತ್ತಿ ಬಳಿಕ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಗಾಯಕ ಅರೀಜಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 10:56 IST
Last Updated 9 ಫೆಬ್ರುವರಿ 2026, 10:56 IST
   

ಖ್ಯಾತ ಹಿನ್ನೆಲೆ ಗಾಯಕ ಅರೀಜಿತ್ ಸಿಂಗ್‌ ಅವರು ಈ ಹಿಂದೆ ಗಾಯನಕ್ಕೆ ನಿವೃತ್ತಿ ನೀಡುತ್ತೇನೆ ಎಂದು ಘೋಷಿಸಿದ್ದರು. ಆದರೆ ಕೋಲ್ಕತ್ತದಲ್ಲಿ ನಡೆದ ಸಿತಾರ್ ವಾದಕಿ ಅನುಷ್ಕಾ ಶಂಕರ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅನುಷ್ಕಾ ಶಂಕರ್ ಮತ್ತು ತಬಲ ವಾದಕ ಬಿಕ್ರಮ್ ಘೋಷ್ ಅವರೊಂದಿಗೆ ಪಂಡಿತ್ ರವಿಶಂಕರ್ ಅವರ ‘ಮಾಯಾ ಭೋರಾ ರಾತಿ’ ಹಾಡನ್ನು ಹಾಡಿದ್ದಾರೆ. 

ಈ ಕುರಿತು ಸಿತಾರ್ ವಾದಕಿ ಅನುಷ್ಕಾ ಶಂಕರ್ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಅರೀಜಿತ್ ಸಿಂಗ್ ನೇರ ಪ್ರದರ್ಶನ ನೀಡಲು ಹೆದರುತ್ತಿದ್ದರು. ಹೇಳಲು ಇನ್ನೂ ತುಂಬಾ ಇದೆ. ಆದರೆ ನನ್ನ ತಂದೆಯ ಧ್ವನಿಯಲ್ಲಿ ಕೇಳುತ್ತಿದ್ದ ಬಂಗಾಳಿ ಹಾಡಿಗೆ ಅರೀಜಿತ್ ಸಿಂಗ್ ಅವರು ಮತ್ತೆ ಜೀವ ತುಂಬಿದ್ದಾರೆ. ತುಂಬ ಖುಷಿಯಾಯಿತು’ ಎಂದು ಬರೆದಿದ್ದಾರೆ. 

ADVERTISEMENT

‘ಅರೀಜಿತ್ ಸಿಂಗ್ ಅವರ ನಮ್ರತೆ ಮತ್ತು ಹಿರಿಯರ ಮೇಲಿನ ಗೌರವದ ಕುರಿತು ತಬಲಾ ವಾದಕ ಬಿಕ್ರಮ್ ಘೋಷ್ ‘ ಅನುಷ್ಕಾ ಶಂಕರ್ ಅವರೊಂದಿಗೆ 90 ಹಾಗೂ 2000ರ ದಶಕದಲ್ಲಿ ಒಟ್ಟಿಗೆ ನುಡಿಸಿದ ಸಂಗೀತದ ರಾತ್ರಿಗಳು ನೆನಪಾದವು. ಇಂದು ರಾತ್ರಿ ಅವರ ಕೋಲ್ಕತ್ತದಲ್ಲಿ ಸಂಗೀತ ಪ್ರದರ್ಶನಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು! ನಾನು ಗುರೂಜಿ ಪಂಡಿತ್ ರವಿಶಂಕರ್ ಅವರ ಸಂಯೋಜನೆಯ ಫೈರ್ ನೈಟ್‌ನಲ್ಲಿ ನುಡಿಸಿದೆ.’ ಎಂದು ಹೇಳಿದ್ದಾರೆ.

‘ಮಾಯಾ ಭೋರಾ ರಾತಿ’ ಹಾಡಿಗೆ ನಾನು ನುಡಿಸಿದ ತಬಲವನ್ನು ಅರೀಜಿತ್ ಸಿಂಗ್ ಮತ್ತೊಮ್ಮೆ ಮೆಚ್ಚಿಕೊಂಡರು. ಜನವರಿ 27ರಂದು ಅರ್ಜಿತ್ ಅವರು ತಮ್ಮ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಹೇಳಿದ್ದು, ಆಘಾತಕಾರಿ ಘೋಷಣೆಯಾಗಿತ್ತು’ ಎಂದು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.